
ಭಾಲ್ಕಿ : ಮೇ.22:ತಾಲೂಕಿನ ಮಾವಿನಹಳ್ಳಿ ಮಠದ ಶ್ರೀ ಶಂಕರಯ್ಯಾ ಸ್ವಾಮಿಗಳು, ತಾಲೂಕಿನ ಖಾನಾಪೂರ ಹತ್ತಿರದ ಶ್ರೀಕ್ಷೇತ್ರ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನದಲ್ಲಿ ಇದೇ ಮೇ. 27 ರಿಂದ 2025 ರ ಸೆ. 24 ರ ವರೆಗೆ 121ದಿಗಳ ಕಾಲ ಶ್ರೀಶೈಲ್ಯ ಜಗದ್ಗುರು ಮತ್ತು ಶ್ರೀ ಕಾಶಿ ಜಗದ್ಗುರುಗಳ ಸತ್ಯ ಸಂಕಲ್ಪದ ಮೇರೆಗೆ ತಪೋಷ್ಠಾನ ಕೈಗೊಳ್ಳಲಿದ್ದಾರೆ ಎಂದು ಶ್ರೀ ಶಂಕರಯ್ಯಾ ಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಶಂಕರಯ್ಯಾ ಸ್ವಾಮಿಗಳು ಮುಕ್ತಿ ಮಂದಿರ ಧರ್ಮಕ್ಷೇತ್ರದ ಪಂಚಾಚಾರ್ಯರ ಸಮಾವೇಶದಲ್ಲಿ ಜಗದ್ಗುರುಗಳ ಆಶಿರ್ವಾದ ಪಡೆದು, ಅನುಷ್ಠಾನ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಹೀಗಾಗಿ ಇವರ ಅನುಷ್ಠಾನ ನಿರ್ವಿಘ್ನವಾಗಿ ನಡೆಯಲೆಂದು ನಾಡಿನ ರೇವಗ್ಗಿ ರೇವಣಾಸಿದ್ದೇಶ್ವರ ದೇವಸ್ಥಾನ, ಗೋರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಪೂಜ್ಯರ ಅನುಷ್ಠಾನ ಮುಕ್ತಾಯ ಸಮಾರಂಭಕ್ಕೆ ಪಂಚ ಜಗದ್ಗುರುಗಳು ಆಗಮಿಸುವವರಿದ್ದಾರೆ ಎಂದು ತಿಳಿಸಿದ್ದಾರೆ.