
ಕೋಲಾರ,ನ.೧೧- ಜಯ ಕರ್ನಾಟಕ ಕೋಲಾರ ಜಿಲ್ಲಾ ವಾಹನ ಚಾಲಕರ ಘಟಕ ವತಿಯಿಂದ ಕೋಲಾರ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ ಡಾ.ರಾಜ್ ಕುಮಾರ್ ಜೋಡಿ ರಸ್ತೆಯ ವೃತ್ತದಲ್ಲಿ ಕರಾಟೆ ಕಿಂಗ್ ದಿ. ಶಂಕರ್ ನಾಗ್ ರವರ ಹುಟ್ಟು ಹಬ್ಬದ ಆಚರಣೆಯನ್ನು ಆಚರಿಸಿ ಸಿಹಿ ಹಂಚಲಾಯಿತು.
ಸಂಘಟಟನೆಯ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜ್ ಮಾತನಾಡಿ, ಶಂಕರ್ ನಾಗ್ ರವರು ಕನ್ನಡ ಚಿತ್ರ ರಂಗದಲ್ಲಿ ಅಪ್ರತಿಮ ನಾಯಕ ನಟರಾಗಿದ್ದರು. ಆಟೋ ರಾಜಾ ಚಿತ್ರದ ಮೂಲಕ ಆಟೋ ಚಾಲಕರಲ್ಲಿ ಸ್ಪೂರ್ತಿ ತುಂಬಿದರು ಮತ್ತು ಸಾಂಗ್ಲಿಯಾನ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ದುಷ್ಟರಿಗೆ ಸಿಂಹ ಸ್ವಪ್ನವಾಗಿ ನಟಿಸಿ ಪೊಲೀಸ್‌ರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಸರ್ಕಾರದಿಂದ ಬೆಂಗಳೂರಿಗೆ ಮೆಟ್ರೋ ರೈಲು ತರಿಸುವ ಯೋಜನೆಯ ಉದ್ದೇಶ ಶಂಕರ್ ನಾಗ್ ಅವರದ್ದಾಗಿತ್ತು. ತಮ್ಮ ಸ್ವಂತ ಹಣದಲ್ಲಿ ಮೆಟ್ರೋ ಯೋಜನೆಯ ಉದ್ದೇಶಕ್ಕಾಗಿ ವಿದೇಶಕ್ಕೆ ತೆರಳಿ ಯೋಜನೆಯ ರೂಪುರೇಷೆಗಳನ್ನು ಸಿದ್ದಪಡಿಸಿದ್ದರು. ಆದರೆ ಯೋಜನೆಯ ಕನಸು ಈಗ ನನಸಾಗಿದೆ. ಅವರಿಗೆ ಜನ ಸಾಮಾನ್ಯರ ಮೇಲೆ ಅಪಾರವಾದ ಪ್ರೀತಿ ಇತ್ತು. ಶಂಕರ್ ನಾಗ್ ರವರನ್ನು ಕನ್ನಡ ನಾಡಿನ ಜನತೆ ಎಂದಿಗೂ ಮರೆಯಲಾರರು ಎಂದರು.
ಕಾರ್ಯಕ್ರಮದಲ್ಲಿ,ವಾಹನ ಚಾಲಕರ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ್ ಎನ್, ಉಪಾಧ್ಯಕ್ಷ ಕೆ.ಎನ್. ಪ್ರಕಾಶ್, ತ್ರಿಚಕ್ರ ವಾಹನ ಚಾಲಕರ ಘಟಕದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ವೇಣು, ಜಯ ಕರ್ನಾಟಕ ಆಟೋ ಕೆ.ವಿ. ಶ್ರೀರಾಮ್ (ಕೆ. ವಿ.ಎಸ್.ಆಟೋ), ಜಿ.ಎಮ್. ಗಿರೀಶ್, ಜಗದೀಶ್, ಮಂಜುನಾಥ್ ಸಿಂಗ್, ಕೆ.ಸಿ. ನಾರಾಯಣಸ್ವಾಮಿ, ನಂದೀಶ್ ವಿ, ಸುಬ್ರಮಣಿ ಡಿ.ಎಸ್, ಸುರೇಶ, ಆನಂದ್ ಕುಮಾರ್ (ಟೈಲರ್ ), ಪಿ.ವಿ. ವೆಂಕಟರಮಣ, ಗುರುರಾಜ್ ಸಿ, ರಾಮಪ್ಪ, ಲೋಕೇಶ್ ಎಸ್, ನರಸಿಂಹರಾಜು, ಆರ್. ನಾಗರಾಜ್ ಇದ್ದರು.



























