Home ಜಿಲ್ಲೆ ಸತ್ಯಾತ್ಮತೀರ್ಥರ ಭಕ್ತರಿಂದ ಶನೇಶ್ವರ ಜಯಂತಿ ಆಚರಣೆ

ಸತ್ಯಾತ್ಮತೀರ್ಥರ ಭಕ್ತರಿಂದ ಶನೇಶ್ವರ ಜಯಂತಿ ಆಚರಣೆ

ಬೀದರ್: ಶ್ರೀ ಶನೇಶ್ವರ ಜಯಂತಿ ನಿಮಿತ್ತ ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನದಲ್ಲಿ ಶ್ರೀ ಉತ್ತರಾದಿ ಮಠಾಧೀಶರಾದ ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ಲೋಕ ಕಲ್ಯಾಣಾರ್ಥವಾಗಿ ಅವರ ಭಕ್ತ ವೃಂದವು ಶನಿವಾರ ಶ್ರೀ ಶನಿಮಂತ್ರ ಹೋಮ, ಶ್ರೀ ನರಸಿಂಹ ಮಂತ್ರ ಹೋಮ ನೆರವೇರಿಸಿತು.
ಉತ್ತರಾದಿ ಮಠದ ಮಠಾಧಿಕಾರಿಯಾದ ಅಜಯ್ ಆಚಾರ್ಯ, ಪ್ರಭಾಕರರಾವ್, ರಾಘವೇಂದ್ರ ಜೋಶಿ, ಭಗವಾನರಾವ್, ಕಮಲಾಕರ ಗೋರ್ಟಾ, ಶಶಿಕಾಂತ ಬೆಂಡೆ, ದತ್ತಾತ್ರೇಯ ಕುಲಕರ್ಣಿ ಮತ್ತಿತರರು ಇದ್ದರು ಎಂದು ಅಜಯ್ ಆಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.