ಶ್ರೀರಾಮನ ಪಾತ್ರದಲ್ಲಿ ಶಕೀಲ್ ಪ್ರತಿಭೆ ಅನಾವರಣ

ಔರಾದ್: ಡಿ.24:ತಾಲೂಕಿನ ಕೊಳ್ಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ದ್ವಿತೀಯ ಸ್ಥಾನ ಪಡೆದಿದೆ.

ಶಾಲೆಯ ವಿದ್ಯಾರ್ಥಿ ಶಕೀಲ್ ಶಿರಾಜಪಾಶಾ ಅವರು ಛದ್ಮವೇಷ ವಿಭಾಗದಲ್ಲಿ ಶ್ರೀರಾಮನ ಪಾತ್ರ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ರಾಖಿ ಸುರ್ಯಕಾಂತ ಅಭಿನಯ ಗೀತೆಯಲ್ಲಿ ಬಹುಮಾನ ಪಡೆದಿದ್ದಾರೆ. ಮಕ್ಕಳಿಗೆ ಶಾಲೆಯ ಸಹ ಶಿಕ್ಷಕಿ ಆಶಾಬಿ ಅವರು ಮಾರ್ಗದರ್ಶನ ಮಾಡಿದ್ದು ಮಕ್ಕಳ ಪ್ರತಿಭೆ ಅನಾವರಣಗೊಂಡಿದೆ.

ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕ ಕಲ್ಲಪ್ಪ ಎಸ್ ಚಳಕಾಪುರೆ, ಶಿಕ್ಷಕರಾದ ದಶರಥ ವನಮಾರಪಳ್ಳಿ, ರಾಜಕುಮಾರ ಪಾಂಚಾಳ, ಜ್ಯೋತಿ, ಧರ್ಮಪ್ರಿಯಾ, ಮುಕ್ತಬಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.