Home ಜಿಲ್ಲೆ ಕಲಬುರಗಿ ಜಿಲ್ಲಾಧಿಕಾರಿಗಳಿಂದ ಶಹಾಬಾದ ತಾಲೂಕು ಪ್ರವಾಸ: ಬೆಳೆ ಹಾನಿ ವಿಕ್ಷಣೆ

ಜಿಲ್ಲಾಧಿಕಾರಿಗಳಿಂದ ಶಹಾಬಾದ ತಾಲೂಕು ಪ್ರವಾಸ: ಬೆಳೆ ಹಾನಿ ವಿಕ್ಷಣೆ

ಕಲಬುರಗಿ,ಸೆ.11: ಜಿಲ್ಲಾದಿಕಾರಿ ಇಕ್ರಂ ಶರೀಫ್ ಅವರು ಮಂಗಳವಾರ ಶಹಾಬಾದ ತಾಲೂಕು ಪ್ರವಾಸ ಕೈಗೊಂಡು ತರನಳ್ಳಿ ಗ್ರಾಮದಲ್ಲಿ ರೈತನ ಹೊಲಕ್ಕೆ ಭೇಟಿ ನೀಡಿ ಬರಗಾಲದಿಂದ ಹಾನಿಯಾದ ಬೆಳೆ ಹಾನಿ ವೀಕ್ಷಿಸಿದರು.
ಆರಂಭದಲ್ಲಿ ಮರತೂರ ಗ್ರಾಮಕ್ಕೆ ಭೇಟಿ ನೀಡಿದ ಡಿ.ಸಿಮ ಅವರು, ಎಸ್.ಐ.ಆರ್. ಅಂಗವಾಗಿ ತಹಶೀಲ್ದಾರ ನೀಲಪ್ರಭಾ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮತದಾರರ ವಿಚಾರಣೆ ಸಭೆ ಪ್ರಕ್ರಿಯೆ ವೀಕ್ಷಿಸಿದರು.
ನಂತರ ಶಹಾಬಾದ ಪಟ್ಟಣಕ್ಕೆ ಭೇಟಿ ನೀಡಿ ನಗರಸಭೆ ಅಧಿಕಾರಿಗಳೊಂದಿಗ ಸಭೆ ನಡೆಸಿದ ಅವರು ನಗರದ ನಿವಾಸಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಬೇಕೆಂದರು. ಕಂದಾಯ ಅಧಿಕಾರಿಗಳೊಂದಿಗ ಚರ್ಚಿಸಿದ ಅವರು, ನಾಡ ಕಚೇರಿ ಮೂಲಕ ಸಾರ್ವಜನಿಕರಿಗೆ ನೀಡುವ ಸೇವೆಗಳು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಶ್ರೀ ಶರಣಬಸವೇಶ್ವರರ ದೇವಸ್ಥಾನದಿಂದ ಬೃಂದಾವನ ಧಾಮವರೆಗೆ ನಡೆಯುತ್ತಿರುವ ಡಾಂಬರೀಕರಣ ರಸ್ತೆ ಕಾಮಗಾರಿ ವೀಕ್ಷಿಸಿ ಡಿ.ಸಿ. ಅವರು, ಕಾಮಗಾರಿಯಲ್ಲಿ ಗುಣಮಟ್ಟದ ಕಾಯ್ದುಕೊಳ್ಳುವಂತೆ ಗುತ್ತಿಗೆದಾರನಿಗೆ ಸೂಚಿಸಿದರು.
ಪೆÇ್ರಬೇಷನರ್ ಐ.ಎ.ಎಸ್. ಅಧಿಕಾರಿ ಶಿಖರ್ ಮೋಘಾ, ನಗರಸಭೆ ಪೌರಾಯುಕ್ತ ಮನೋಜ ಗುರಿಕರ್ ಸೇರಿದಂತೆ ಇತರೆ ಅಧಿಕಾರಿಗಳು, ಕಂದಾಯ ನಿರೀಕ್ಷರು ಇದ್ದರು.