
ರಬಕವಿ ಬನಹಟ್ಟಿ,ಫೆ22: ಮಹಿಳೆಯರು ತಮ್ಮ ಶ್ರಮ ಮತ್ತು ಪ್ರತಿಭೆ ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡು ಕುಟುಂಬದ ಆರ್ಥಿಕ ಸ್ಥಿರತೆಯನ್ನು ಸುಧಾರಿಸಬೇಕೆಂದು ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ ಹೇಳಿದರು,
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಶ್ರೀ ಕಾಡಸಿದ್ದೇಶ್ವರ ಸಮುದಾಯ ಭವನದಲ್ಲಿ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮದ ವತಿಯಿಂದ ಮತಕ್ಷೇತದ್ರಾದ್ಯಂತ 150 ಕ್ಕೂ ಅಧಿಕ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ವಿತರಿಸಿ ಮಾತನಾಡಿದರು.
ಸ್ವಾವಲಂಬಿ ಮಹಿಳೆಯರು ಕುಟುಂಬದ ಶಕ್ತಿಯ ಸಂಕೇತ,ಮಹಿಳೆಯರು ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಬದುಕನ್ನು ಸುಧಾರಿಸಿಕೊಳ್ಳುವ ಮೂಲಕ ಆರ್ಥಿಕತೆಯಿಂದ ಸದೃಡವಾಗಬೇಕು,ಹೊಲಿಗೆ ಯಂತ್ರಗಳ ಮೂಲಕ ಸೃಜನಶೀಲತೆ ಬೆಳೆಸಿಕೊಂಡು ಮುಂದುವರೆಯಬೇಕು,ಸರ್ಕಾರ ಹಾಗೂ ನಿಗಮವೂ ಸದಾ ನಿಮ್ಮೊಂದಿಗೆ ಬೆನ್ನೆಲುಬಾಗಿ ನಿಂತಿದೆ ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಧೈರ್ಯದಿಂದ ಮುನ್ನುಗ್ಗಿ ಸಾಧಿಸಬೇಕು,ಮಹಿಳೆಯರು ಅಬಲೆಯಲ್ಲ,ಸಬಲೆ ಎಂದು ಸಾಬೀತುಪಡಿಸಬೇಕೆಂದು ಹೇಳಿದರು,
ಇದೇ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಹಿರೇಮಠದ ಶ್ರೀ ಶರಣಬಸವ ಶಿವಾಚಾರ್ಯರು, ವೇದಿಕೆಯಲ್ಲಿ ಆನಂದ ಹಟ್ಟಿ,ಸಹಾಯಕ ನಿರ್ದೇಶಕ ಮಲ್ಲೇಶ್ ಬಿರಾದಾರ,ಶಿವಲಿಂಗ ಟಿರಕಿ,ಗುರುರಾಜ ಕುಲಕರ್ಣಿ,ಮಾಲಾ ಬಾವಲತ್ತಿ,ಶೇಖರ ಹಕ್ಕಲದಡ್ಡಿ,ರವಿ ಬಾಡಗಿ, ಸೇರಿದಂತೆ ಅನೇಕರಿದ್ದರು.






















