Home ಜಿಲ್ಲೆ ದೇವಸ್ಥಾನದ ಕೆಳಂತಸ್ತಿನಲ್ಲಿ ಕೊಳಚೆ ನೀರು: ಸ್ವಚ್ಛತೆಗೆ ಆಗ್ರಹ

ದೇವಸ್ಥಾನದ ಕೆಳಂತಸ್ತಿನಲ್ಲಿ ಕೊಳಚೆ ನೀರು: ಸ್ವಚ್ಛತೆಗೆ ಆಗ್ರಹ

ಸಂಜೆ ವಾಣಿ ವಾರ್ತೆ,
ಜಮಖಂಡಿ ಮಾ.೨೪: ನಗರದ ಚಂದ್ರಗಿರಿ ಪೇಠದಲ್ಲಿರುವ ಚಂದ್ರವತ್ತಾಯಿ ದೇವಸ್ಥಾನದ ಕೆಳಂತಸ್ತಿನಲ್ಲಿ ಕೊಳಚೆ ನೀರು (ಗಟಾರ) ಸಂಗ್ರಹವಾಗಿರುವುದು ಭಕ್ತರು ಹಾಗೂ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಥಳೀಯ ಮುಖಂಡ ಶಶಿಧರ ದೊಡಮನಿ ಅವರು ಸಂಬAಧಪಟ್ಟ ಅಧಿಕಾರಿಗಳು ತಕ್ಷಣ ಸ್ವಚ್ಛತಾ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ದೇವಸ್ಥಾನದ ಪಕ್ಕದ ಗಟಾರದಿಂದ ಕೊಳಚೆ ನೀರು ಒಳನುಗ್ಗುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಅದನ್ನು ತಕ್ಷಣ ದುರಸ್ತಿ ಮಾಡಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಅವರು ಒತ್ತಾಯಿಸಿದರು.
ಈ ಸಮಸ್ಯೆಯಿಂದ ಭಕ್ತರಿಗೆ ತೊಂದರೆ ಉಂಟಾಗುತ್ತಿರುವುದರಿAದ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.