Home ಜಿಲ್ಲೆ ಕಲಬುರಗಿ ಸೇವಾಲಾಲ್ ಮಹಾರಾಜರ ಜಯಂತಿ ರಾಜ್ಯಕ್ಕೆ ಮಾದರಿ

ಸೇವಾಲಾಲ್ ಮಹಾರಾಜರ ಜಯಂತಿ ರಾಜ್ಯಕ್ಕೆ ಮಾದರಿ

ವಾಡಿ: ಫೆ.16:ಈ ದೇಶದಲ್ಲಿ ಶರಣರು, ಸಂತರು ಬಂದು ಹೋಗಿದ್ದಾರೆ. ಬಂಜಾರ ಸಮುದಾಯದ ಆರಾಧ್ಯ ದೈವ ವಾಗಿರುವ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಪೌರಗಡದ ಬಾಬು ಸಿಂಗ್ ಮಹಾರಾಜ ಹೇಳಿದರು.

ಪಟ್ಟಣದ ಸೇವಾಲಾಲ್ ನಗರ ತಾಂಡಾದಲ್ಲಿ ಬಂಜಾರ ಲಂಬಾಣಿ ಸೇವಾ ಸಂಘದ ಸಹಯೋಗದಲ್ಲಿ ರವಿವಾರ ಆಯೋಜಿಸಿದ್ದ 287ನೇ ಜಯಂತ್ಯುತ್ಸವ ಹಾಗೂ 25ನೇ ವರ್ಷದ ರಜಥ ಮಹೋತ್ಸವ ಸಂಭ್ರಮದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಮೀಸಲಾತಿಯಲ್ಲಿ ಲಂಬಾಣಿ ಸಮುದಾಯವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಇಮ್ಮಟಿಸುವ ಪ್ರಯತ್ನ ಸರ್ಕಾರ ನಡೆಸುತ್ತಿದೆ. ಇದರ ವಿರುದ್ಧ ನಾವು ಸಮರಸಾರಬೇಕಾದ ಕಾಲ ಬಂದೊದಗಿದೆ. ಕೈಯಲ್ಲಿ ಧ್ವಜ ಹಿಡಿದು ಮಿಸಲಾತಿ ಅನ್ಯಾಯ ಪ್ರಶ್ನಿಸಿ ನಿಮ್ಮ ಜೊತೆ ಹೋರಾಟದ ಧ್ವನಿಯಾಗಲು ನಾನು ಸಿದ್ದನಿದ್ದೇನೆ. ಮನಸ್ತಾಪಗಳನ್ನು ಬದಿಗೆಟ್ಟು ಹೋರಾಟದ ಕಿಚ್ಚು ಹಚ್ಚಲು ಸಿದ್ದರಾಗೋಣ ಎಂದು ಕರೆ ನೀಡಿದರು.

ಮಾಜಿ ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ನಾಗಮೋಹನ ದಾಸ ವರದಿ ಪರಿಗಣಿಸದೆ ಸರ್ಕಾರ ಮೀಸಲಾತಿ ಜಾರಿಗೊಳಿಸಿದೆ. ನಮ್ಮ ಸಮುದಾಯಕ್ಕೆ ಬಾರಿ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಮಲತಾಯಿ ಧೋರಣೆ ಹಾಗೂ ಖರ್ಗೆ ಕುಟುಂಬದವರ ವಿರುದ್ಧ ನಾವು ನಿಲ್ಲಬೇಕಾಗಿದೆ. ನಮಗೆ ರಾಜಕೀಯ ಶಕ್ತಿ ಕಳೆಚ್ಚಿ ಹೋಗಿದೆ ನಮಗೆ ಇರೋದು ಒಂದೇ ದೈವಶಕ್ತಿ. ಬಂಜಾರ ಸಮುದಾಯದವರನ್ನು ಒಬ್ಬರನ್ನು ಮಂತ್ರಿ ಮಾಡಿದ ಕಾಂಗ್ರೆಸ್ ಪಕ್ಷದವರು ಈ ಷಡ್ಯಂತರ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಮಾತನಾಡಿ, ನಾನು ಮಂತ್ರಿ ಇದ್ದಾಗ ಮೊಟ್ಟಮೊದಲ ಬಾರಿಗೆ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ ಹುಟ್ಟು ಹಾಕಿದ್ದೇನೆ. ಅಂದು ಪ್ರಾರಂಭವಾದ ವಾಡಿ ಜಯಂತಿ ಇಂದಿಗೆ 25 ವರ್ಷ ಕಳೆದಿದೆ. ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಸುಪುತ್ರ ಪ್ರಿಯಾಂಕ್ ಖರ್ಗೆ ಈ ಭಾಗದ ಬಂಜಾರ ಸಮುದಾಯವನ್ನು ಹತ್ತಿಕ್ಕು ಹುನ್ನಾರ ಮಾಡುತ್ತಿದ್ದಾರೆ. ಮೀಸಲಾತಿಯಲ್ಲಿನ ಧೋರಣೆ ಇಡೀ ಬಂಜಾರ ಸಮುದಾಯಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಮೀಸಲಾತಿ ತಾರತಮ್ಯ ನೀತಿ ಖಂಡಿಸಿ ರಾಜ್ಯಾದ್ಯಂತ ಹೋರಾಟ ನಡೆಸಲು ನಾವು ಸಿದ್ಧರಿದ್ದೇವೆ ಎಂದರು.

ಬಂಜಾರ (ಲಂಬಾಣಿ) ಸೇವಾ ಸಂಘದ ರಾಜ್ಯಾಧ್ಯಕ್ಷ ಎನ್.ಆರ್ ನಾಯಕ ಮಾತನಾಡಿ ಮೀಸಲಾತಿಯಲ್ಲಿ ಮಾಡಲಾದ ಅನ್ಯಾಯ ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೇ ಹೋಡಲಾಗಿದೆ. ಇದನ್ನು ಸರಿಪಡಿಸುವಂತೆ ನಾವು ಸರ್ಕಾರದ ಮೇಲೆ ಒತ್ತಡ ಸಹ ಹಾಕಬೇಕಾಗಿದೆ ಎಂದರು.

ನಿವೃತ್ತ ನ್ಯಾಯಾಧೀಶ ಸುಭಾಶ ರಾಠೋಡ, ಅಳೋಳ್ಳಿ ಸಂಗಮನಾಥ ದೇವರು ಸಭೆ ಉದ್ದೇಶಿಸಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ, ಹಲಕರಟಿ ರಾಜಶೇಖರ ಶಿವಾಚಾರ್ಯ, ಮುನೀಂದ್ರ ಸ್ವಾಮೀಜಿ, ಮಾತಾ ಸರಸ್ವತಿ ದೇವಿಯ. ಬಂಜಾರ (ಲಂಬಾಣಿ) ಸೇವಾ ಸಂಘದ ಅಧ್ಯಕ್ಷ ರಮೇಶ ಕಾರಬಾರಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪೆÇೀಮಾ ಕೆ. ರಾಠೋಡ, ಉಪಾಧ್ಯಕ್ಷ ನೀಲಸಿಂಗ್ ಚವ್ಹಾಣ, ಮೇಘನಾಥ ಯಾಗಪೂರ, ಹಣಮಂತ ಚವ್ಹಾಣ, ವಿಠ್ಠಲ್ ವಾಲ್ಮೀಕಿ ನಾಯಕ, ಸೋಮು ಚವ್ಹಾಣ, ಗೋರ್ ಸೇನೆ ರಾಜ್ಯಾಧ್ಯಕ್ಷ ರವಿ ಕಾರಬಾರಿ,ಕಿಶನ್ ಜಾಧವ ಅಂಬಾದಾಶ್ ಜಾಧವ ದೇವಜಿ ನಾಯಕ ನಾಮದೇವ್ ರಾಠೋಡ್ ಸೋಮಸಿಂಗ್ ರಾಠೋಡ್ ರಾಮು ರಾಠೋಡ್ ತುಕಾರಾಮ ರಾಠೋಡ್ ಬಾಬು ಮಿಯಾ ರಾಜು ಮುಕ್ಕಣ್ಣ ಬಸವರಾಜ್ ಪಂಚಾಳ್ಳ ಈರಣ್ಣ ಯಾರಿ ಮೋಹನ್ ಕಾರಭಾರಿ ರವಿ ಜಾಧವ ಶ್ರೀಕಾಂತ್ ರಾಠೋಡ್ ನಿರೋಪ ಣ್ಣೆ ಮಾಡಿದರು