
ಜೇವರ್ಗಿ: ತಾಲೂಕಿನಲ್ಲಿ ವಿದ್ಯಾರ್ಥಿಗಳ ಆಧಾರ್ ನೋಂದಣಿಗೆ ಕೂಡಲೆ ಪ್ರತಿ ಗ್ರಾಮ ಪಂಚಾಯತ್ ಕೇಂದ್ರಕೊAದು ಆಧಾರ್ ಕೇಂದ್ರ ಸ್ಥಾಪಿಸಬೇಕು ಎಂದು ಡಾ|| ವಿಷ್ಣು ಸೇನಾ ಸಮೀತಿ ತಾಲೂಕ ಅಧ್ಯಕ್ಷರಾದ ಬಸವರಾಜ ಬಿಬಾಗೇವಾಡಿ ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಬಾಗೇವಾಡಿರವರು, ಜೇವರ್ಗಿ ಬಹುದೊಡ್ಡ ತಾಲೂಕು ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಮತ್ತು ಹೋಬಳಿ ಕೇಂದ್ರವಾಗಿದ್ದು, ಇಲ್ಲಿ ಶಾಲಾ/ ಕಾಲೇಜುಗಳ ಜನಸಂಖ್ಯೆ ಹೆಚ್ಚಾಗಿದ್ದು, ಪಟ್ಟಣದಲ್ಲಿ ಕೇವಲ ತಸಿಲ್ ಕಚೇರಿ, ಎಸ್.ಬಿ.ಐ ಬ್ಯಾಂಕ ಮತ್ತು ಅಂಚೆ ಕಛೇರಿಯಲ್ಲಿ ೩ಆಧಾರ ನೋಂದಣಿ ಕೇಂದ್ರ ಇದ್ದು, ಅಂಚೆ ಕಛೇರಿಯಲ್ಲಿ ಸುಮಾರು ೧೦-೧೨ದಿನಗಳಿಂದ ಆಧಾರ ನೋಂದಣಿ ಕೇಂದ್ರ ಬಂದ ಮಾಡಲಾಗಿದೆ. ಇನ್ನೂಳಿದ ಕಡೆಯಲ್ಲಿ ತಮ್ಮ ಮನಸ್ಸಿಗೆ ಬಂದ ಸಮಯದಲ್ಲಿ ತೆರೆದು, ಬಡರ್ವಜನಿಕರಿಗೆ ಮನಸ್ಸಿಗೆ ಬಂದಹಾಗೆ ೩೦೦, ೫೦೦, ೧೦೦೦ ರೂಪಾಯಿಗಳಂತೆ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಇಲ್ಲಿಯೂ ಕೂಡ ರಾಜಕೀಯಬಲ ಮತ್ತು ಹಣಬಲ ನಡೆದಿದೆ. ಎಂದು ದೂರಿದರು.
ಸರಕಾರದ ಆದೇಶದ ಮೇರೆಗೆ ಎಲ್ಲಾ ಕೆಲಸ ಕಾರ್ಯಗಳಿಗೂ ಆಧಾರ ಪ್ರಮುಖವಾಗಿದ್ದು, ಮತ್ತು ರೇಷನ್ ಕಾರ್ಡ್ ಗೆ ಇ ಏಙಅ ಮಾಡಿಸುವ ಕಾರ್ಯ ನಡೆದಿದ್ದರಿಂದ ಹಾಗೂ ಶಾಲಾ/ ಕಾಲೇಜುಗಳು ಪ್ರಾರಂಭವಾಗಿ ದ್ದು, ಅವುಗಳಿಗೂ ಕೂಡ ಮತ್ತು ಪಡಿತರ ಚೀಟಿಯಲ್ಲಿ ಹೆಸರು ನೊಂದಾಯಿಸಲು eಞಥಿಛಿ ಮಾಡಿರುವ ಆಧಾರ ಕಡ್ಡಾಯವಾಗಿ ಬೇಕಾಗಿರುವುದರಿಂದ, ಸಾರ್ವಜನಿಕರು ಬಿಸಿಲು, ಎನ್ನದೆ ಬೆಳಿಗ್ಗೆ ೩-೪ ಗಂಟೆಗೆ ಹಳ್ಳಿಗಳಿಂದ ತಮ್ಮ ತಮ್ಮ ಸಣ್ಣ-ಪುಟ್ಟ ಮಕ್ಕಳನ್ನು ಕರೆದುಕೊಂಡು ಬಂದು ಆಧಾರ ನೋಂದಣಿಗೆ ಸರತಿ ಸಾಲಿನಲ್ಲಿ ನಿಂತು, ಒಂದು ದಿನಕ್ಕೆ ಕೇವಲ ೨೦ಜನ ಆಧಾರ ನೋಂದಣಿ ಮಾಡಿಕೊಂಡು ಇನ್ನೂಳಿದವರು ಹೊಟ್ಟೆಗೆ ಒಂದೊತ್ತಿನ್ನ ಊಟ, ನೀರು ಕಾಣದೆ ಬಂದದಾರಿಗೆ ಸುಂಕ ಇಲ್ಲ ಎಂಬAತೆ ತಿರುಗಿ ತಮ್ಮ ಊರಿನತ್ತ ಮುಖಮಾಡಿಕೊಂಡು ಹೋಗುವುದು ದಿನೇ ದಿನೇ ಹೆಚ್ಚುತ್ತಲಿದೆ ವಿನಃ ಕಡಿಮೆಯೆಂತು ಆಗುತ್ತಿಲ್ಲ ಎಂದು ಬಾಗೇವಾಡಿರವರು ಹೇಳಿದರು.
ತಾಲೂಕಿನಲ್ಲಿ ಶಾಲಾ/ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಕೂಡಲೇ ಪ್ರತಿ ಗ್ರಾಮ ಪಂಚಾಯತ್ ಕೇಂದ್ರಕೊAದು, ಹೋಬಳಿಗೊಂದು ಆಧಾರ್ ಕೇಂದ್ರ ಸ್ಥಾಪಿಸಿ ಆಧಾರ ಕೇಂದ್ರ ಸ್ಥಾಪಿಸಿಬೇಕು, ಎಲ್ಲಾ ಆಧಾರ ಕೇಂದ್ರಗಳಲ್ಲಿ ಗ್ರಾಹಕರಿಗೆ ಪ್ರೀಯಾಗಿ, ಆಧಾರ ತೆಗೆಯಬೇಕು ಎನ್ನುವ ಕಾನೂನು ಇದ್ದರೂ ಕೂಡ, ಗ್ರಾಹಕರ ಹತ್ತಿರ ೩೦೦, ೫೦೦, ೧೦೦೦ ಹಣ ವಸೂಲಿ ಮಾಡುತ್ತಿರುವ ಆಧಾರ ಆಪರೇಟರ್ನ್ನೂ ಕೂಡಲೇ ಅಮಾನತ್ತು ಮಾಡಿ ಅಂತವರ ಆಧಾರ್ ನೋಂದಣಿ ಲಾಗಿನ್ ಬಂದ್ ಮಾಡಿಸಿ ಅವರ ಮೇಲೆ ಕ್ರಮ ಕೈಗೊಂಡು, ಮತ್ತೊಬ್ಬನಿಷ್ಟಾವಂತ ಆಪರೇಟರನ್ನು ನೇಮಕ ಮಾಡಬೇಕೆಂದು ಡಾ|| ವಿಷ್ಣು ಸೇನಾ ಸಮೀತಿ ತಾಲೂಕ ಅಧ್ಯಕ್ಷರಾದ ಬಸವರಾಜ ಬಿ ಬಾಗೇವಾಡಿರವರು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ೬-೭ದಿನಗಳಿಂದ ಇಲ್ಲಿಗೆ ಬರಾಕತ್ತಿನ್ರಿ, ಆದ್ರೂ ಇನ್ನೂ ಕೆಲಸ ಆಗಾವಲ್ಲೂ, ಯಾವ ಸರಕಾರಿ ಕೆಲಸಕ್ಕ ಹೋದ್ರು ಆಧಾರ ಕಾರ್ಡ ಬೇಕ್ ಅಂತಾರ ರೀ, ಇಲ್ಲಿಗೆ ಬಂದ್ರ ದಿನಕ್ಕೆ ೨೦ಟೋಕನ್ ಕೊಡತಿವಿ ಅಂತಾರಿ, ಬೆಳಿಗ್ಗೆ ೩-೪ಕ್ಕೆ ಬಂದ್ರೂ, ಪಾಳಿಗೆ ಯಾರೂ ಇರಲ್ಲ, ಆದ್ರೂ ಅವರ ಬಳಿ ೧೦ಟೋಕನ್ ಪಾಳಿ ಇದ್ದಿರತಾವ್ ರೀ ಕೇಳಿದರೆ ಅವರು ಬೆಳಿಗ್ಗೆನೆ ಬಂದಾರಾ ಯಾಕ ವದ್ರಕತ್ತಿದಿ ಸುಮ್ನ ಕೂಡು ಅಂತಾ ನಮಗೆ ಅಂಜಸ್ಥಾರ ರೀ, ಏಮಾಡೋದುಸಾಬ್ರೆ ಸುಮ್ಮನ ಕುಂತನAಬರ್ ಬಂದ್ರ ತೆಗಿಸ್ಕೋತಿವಿ ಇಲ್ಲಂದ್ರ ಹಂಗೆ ಹೋಗ ಕತ್ತಿವ ರೀ. ಹಳ್ಳಿ ಅಜ್ಜಿಯ ಮಾತು. ಈ ಸಂಧರ್ಭದಲ್ಲಿ ಲಕ್ಷಣ ಪರಿದ, ಸಿದ್ದಲಿಂಗ ಮಾಹೂರ, ರವಿ ಸರಕಾರ ಇತರರು ಇದ್ದರು.
























