Home ಜಿಲ್ಲೆ ಗುಣಾತ್ಮಕ ಶಿಕ್ಷಣಕ್ಕೆ ಸೇವಾ ಮನೋಭಾವನೆ ಅತಿಮುಖ್ಯ:ಹೆಬ್ಬಾಳೆ

ಗುಣಾತ್ಮಕ ಶಿಕ್ಷಣಕ್ಕೆ ಸೇವಾ ಮನೋಭಾವನೆ ಅತಿಮುಖ್ಯ:ಹೆಬ್ಬಾಳೆ

ಸೈದಾಪುರ:ಫೆ.೧೮:ಗುಣಾತ್ಮಕ ಶಿಕ್ಷಣಕ್ಕೆ ಸೇವಾ ಮನೋಭಾವನೆ ಅತಿ ಮುಖ್ಯವಾಗಿದೆ. ಈ ದಿಸೆಯಲ್ಲಿ ಸಂಘದ ಸಹಕಾರದೊಂದಿಗೆ ಉಪನ್ಯಾಸಕರು ಕಾರ್ಯ ನಿರ್ವಹಿಸಿರುವುದರಿಂದ ಗ್ರಾಮೀಣ ಬಾಗದಲ್ಲಿ ಕಾಲೇಜು ತನ್ನದೆ ಮಹತ್ವ ಪಡೆದುಕೊಂಡಿದೆ ಎಂದು ನಿವೃತ್ತಾ ಮುಖ್ಯಗುರು ಬಿ.ಬಿ.ಹೆಬ್ಬಾಳೆ ಅಭಿಪ್ರಾಯಪಟ್ಟರು.
ಪಟ್ಟಣದ ಮಲ್ಹಾರ ಕಾರಡ್ಡಿ ಬಸವಂತ್ರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾ ವರ್ಧಕ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಹಳೆಯ ಹಿರಿಯ ಉಪನ್ಯಾಸಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅವರ ಮಾರ್ಗದರ್ಶನದಲ್ಲಿ ಸಾಗುವುದರ ಮೂಲಕ ಇನ್ನೂ ಹೆಚ್ಚಿನ ಸಾಧನೆ ನಿಮ್ಮದಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಹಳೆ ಉಪನ್ಯಾಸಕರಾದ ಪ್ರಕಾಶ ಕುಲ್ಕರ್ಣಿ, ಚಂದ್ರಯ್ಯ ಬಾಡಿಯಲ, ಹಂಪಣ್ಣ ಸಜ್ಜನಶೆಟ್ಟಿ, ಲಿಂಗಾರೆಡ್ಡಿ ನಾಯಕ, ಗೂಳಪ್ಪ.ಎಸ್.ಮಲ್ಹಾರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾ ವರ್ಧಕ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಗುರುಮಠಲ್ ತಾಲೂಕಾ ಪಂಚ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಲಕ್ಷಿö್ಮÃಕಾಂತರಡ್ಡಿ ಪಲ್ಲಾ, ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಆಡಳಿತ ಮಂಡಳಿಯ ಸದಸ್ಯರಾದ ಬೂದೆಪ್ಪಗೌಡ ಭೀಮನಳ್ಳಿ, ಸಂಗಾರಡ್ಡಿಗೌಡ ಮಲ್ಹಾರ, ಪ್ರಭುಲಿಂಗ ವಾರದ, ಸಿದ್ರಾಮಪ್ಪಗೌಡ ಗೊಂದಡಗಿ, ಸುರೇಶ ಆನಂಪಲ್ಲಿ, ಚನ್ನಾರೆಡ್ಡಿ ಹುಣಸೇಮರ, ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ಪ್ರಕಾಶರೆಡ್ಡಿ, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಇತರರಿದ್ದರು..