ಪ್ರವಚನ ಮಂಗಲೋತ್ಸವ

ಮುನವಳ್ಳಿ,ಜ12: ಪಟ್ಟಣದ ಸೋಮಶೇಖರ ಮಠದಲ್ಲಿ ಲಿಂಗೈಕ್ಯ ಶ್ರೀ ಬಸವಲಿಂಗ ಶ್ರೀಗಳ 70 ನೇ ಪುಣ್ಯ ಸ್ಮರಣೋತ್ಸವದ ಪ್ರವಚನ ಮಂಗಲೋತ್ಸವ ಜರುಗಿತು.


ಅರಳಿಕಟ್ಟಿ ಶಿವಮೂರ್ತಿ ಶ್ರೀಗಳು ಆಶಿರ್ವಚನದಲ್ಲಿ ಸಂಪತ್ತು ಹಣ ಗಳಿಕೆಯಲ್ಲಿ ನೆಮ್ಮದಿ ಇಲ್ಲ, ಶುದ್ಧ ಕಾಯಕದಿಂದ ಮಾಡಿದ ಹಣ ದಾನ ಮಾಡುವುದರಲ್ಲಿ ನೆಮ್ಮದಿ ಇದೆ. ಕೈಗಳಿಗೆ ಬಂಗಾರದ ಖಡೆ ಹಾಕುವುದರಿಂದ ಮಹತ್ವ ಬರುದಿಲ್ಲ, ದಾನದಿಂದ ಕೈಗಳಿಗೆ ಮಹತ್ವ ಬೆಲೆ ಬರುತ್ತದೆ. ಇದನ್ನರಿತ ದಾನವೀರ ಶಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಆಸ್ತಿಯನ್ನು ಹಾನಗಲ್ಲ ಕುಮಾರೇಶ್ವರರ ಪ್ರೇರಣೆಯಿಂದ ದಾನ ಮಾಡಿ ಅಜರಾಮರರಾದರು. ಆ ದಿಶೆಯಲ್ಲಿ ಜೀವನ ಸಾರ್ಥಕ ಮಾಡಲು ದಾನ ಧರ್ಮ ಅವಶ್ಯ. ವೇದಿಕೆ ಮೇಲಿರುವ ಶ್ರೀಗಳೆಲ್ಲ ಮಾತನಾಡುವ ಜ್ಯೋತಿರ್ಲಿಂಗಗಳು ಇದ್ದಂತೆ ಎಂದರು.


ಘಟಪ್ರಭಾದ ಡಾ. ಮಲ್ಲಿಕಾರ್ಜುನ ಶ್ರೀಗಳು, ಕುಂದರಗಿಯ ಅಮರಸಿದ್ದೇಶ್ವರ ಶ್ರೀಗಳು, ಬೈಲಹೊಂಗಲದ ಪ್ರಭು ನೀಲಕಂಠ ಶ್ರೀಗಳು, ಅಭಿನವ ಶಿವಲಿಂಗ ಶ್ರೀಗಳು, ಸದಾಶಿವ ಶ್ರೀಗಳು, ಬಸವಲಿಂಗ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಶಾಸಕ ವಿಶ್ವಾಸ ವೈದ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಠದ ಕಾರ್ಯಕ್ಕೆ ನನ್ನ ಅಭಯ ಅಸ್ತ ಸದಾ ಇರಲಿದೆ ನಿಮ್ಮ ದೊಡ್ಡ ಕಾರ್ಯಗಳಿಗೆ ನಾನು ಸದಾ ಸಹಾಯ ಮಾಡಲಿದ್ದೇನೆ 50 ಲಕ್ಷದ ಆಶ್ವಾಸನೆ ನೀಡಿದರು.


ಶಾಸಕ ಮಹಾಂತೇಶ ಕೌಜಲಗಿ, ಪುರಸಭೆ ಅಧ್ಯಕ್ಷ ಸಿ.ಬಿ.ಬಾಳಿ, ಎಂ.ಆರ್.ಗೋಪಶೆಟ್ಟಿ, ರವೀಂದ್ರ ಯಲಿಗಾರ, ವಿರೂಪಾಕ್ಷ ಮಾಮನಿ, ಎ.ಪಿ.ಎಮ್.ಸಿ ಅಧ್ಯಕ್ಷ ಚಂದ್ರು ಚಂಬ್ರಿ, ಪಂಚನಗೌಡ ದ್ಯಾಮನಗೌಡ್ರ, ವೇದಿಕೆ ಮೇಲೆ ಇತರರು ಆಸೀನರಾಗಿದ್ದರು.
ಮಲ್ಲಿಕಾರ್ಜುನ ಮಾಮನಿ, ವೀರೇಶ ಬ್ಯಾಹಟ್ಟಿ, ಯಲ್ಲರಾಜ ಶಿಂಗಣ್ಣವರ ಗೌರವ ಸನ್ಮಾನ ಜರುಗಿತು.


ರಾಮಚಂದ್ರ ಮೋಹರೆ, ಮಂಜುನಾಥ ಭಂಡಾರಿ, ಎಂ.ಎಚ್.ಪಾಟೀಲ, ಕೆ.ಬಿ.ನಲವಡೆ, ಸುರೇಶ ಜಂಬ್ರಿ, ವಿರಾಜ ಕೊಳಕಿ, ಐ.ಕೆ.ಮಠಪತಿ, ವೀರೇಶ ಬೆಣಚರಡಿಮಠ, ನಾಗು ಬಡಿಗೇರ, ಇತರರು ಉಪಸ್ಥಿತರಿದ್ದರು.
ಅಕ್ಕನ ಬಳಗ, ರಾಣಿ ಚನ್ನಮ್ಮ ಸಹೇಲಿ, ಇನ್ನರ್ ವೀಲ್ ಕ್ಲಬ್, ವಿವಿಧ ಸಮಾಜಗಳ ಹಿರಿಯರು ಹಾಗೂ ಇತರರು ಗುರು ನಮನ ಸಲ್ಲಿಸಿ ಗೌರವಿಸಿದರು.


ಹರಿಮಂದಿರ ಶ್ರೀ ಸಂತ ಮಂಡಳಿಯಿಂದ ಭಗವನ್ನಾಮ ಸಂಕೀರ್ತನೆ, ದೇವರಾಜ ಯರಕಿಹಾಳ ಸುರೇಶ ಕುಮಾರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಬಸನಗೌಡ ಹುಲಿಗೊಪ್ಪ ನೀರೂಪಿಸಿದರು, ಗಂಗಾಧರ ಗೊರಾಬಾ ವಂದಿಸಿದರು.