
ಕಲಬುರಗಿ:ಮೇ.19:ಮಹಾತ್ಮರು, ಸಂತರು ತಮ್ಮ ಜೀವನವನ್ನೇ ಸಮಾಜಕ್ಕೆ ಅರ್ಪಿಸಿ ನಡೆದಷ್ಟು ದಾರಿಯಿದೆ ಪಡೆದಷ್ಟು ಭಾಗ್ಯವಿದೆ ಎಂದು ಜಗತ್ತಿಗೆ ಸಂದೇಶ ನೀಡಿದಾರೆ ಎಂದು ಶ್ರೀನಿವಾಸ ಸರಡಗಿ, ತಾಜ ಸುಲ್ತಾನಪುರ, ಕುರಕೋಟಿಯ ಚಿನ್ನದಕಂತಿ ಚಿಕ್ಕವಿರೇಶ್ವರ ಸಂಸ್ಥಾನ ಹಿರೇಮಠದ ಪೀಠಾ ಧಿಪತಿಗಳಾದ ಪೂಜ್ಯ ಡಾ. ರೇವಣಸಿದ್ಧ ಶಿವಾಚಾರ್ಯರು ಹೇಳಿದರು. ಕಲಬುರಗಿ ತಾಲ್ಲೂಕಿನ ತಾಜ ಸುಲ್ತಾನಪುರ ಗ್ರಾಮದ ಚಿಕ್ಕವೀರೇಶ್ವರ ಮಠದಲ್ಲಿ ಶ್ರೀ ರೇವಣಸಿದ್ದೇಶ್ವರ ಜೀವನ ದರ್ಶನ ಪ್ರವಚನ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡುತ್ತ ಸಾಧನೆಗೆ ಮಹಾ ಬುದ್ದಿವಂತಿಕೆ ಏನು ಬೇಕಾಗಿಲ್ಲ ಹಿಡಿದ ಕಾರ್ಯವನ್ನು ಶೃದ್ಧೆ, ಭಕ್ತಿಯಿಂದ ಪ್ರಯತ್ನ ಮಾಡಿದರೆ ಗುರಿ ಮುಟ್ಟಬಹುದು ಎಂದು ನುಡಿದರು.ಮುಖ್ಯ ಅಥಿತಿಗಳಾದ ಡಾ. ಲಿಂಗರಾಜಪ್ಪ ಅಪ್ಪ ಮಾತನಾಡುತ್ತ ಇಂದಿನ ದಿನಗಳಲ್ಲಿ ಅನ್ನದ ಹಸಿವಿನಿಂದ
ಬಳಲುತ್ತಿರುವರಕ್ಕಿಂತಲೂ ಸಂಸ್ಕಾರದ ಕೊರತೆಯಿಂದ ಬಾಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಶ್ರೀ ಮಠದ ಪೂಜ್ಯರು ಗಾಮೀಣ ಭಾಗದಲ್ಲಿ ಇಂತಹ ಪ್ರವಚನ ಹಚ್ಚುವ ಮೂಲಕ ಜನರ ಮನಸ್ಸನ್ನು ಶುದ್ಧ ಗೊಳಿಸಿ ಒಳ್ಳೇಯ ಸಮಾಜ ನಿರ್ಮಿಸುತ್ತಿದ್ದಾರೆ ಎಂದು ಹೇಳಿದರು. ಶರಣಬಸಪ್ಪ ಬೆಳಗುಂಪಿ,
ಅಫಜಲಪುರ ಉಪ
ತಹಸೀಲ್ದಾರರಾದ ವೀರಯ್ಯ ಹೊಸಮಠ, ಜಯಶ್ರೀ ಎಸ್ ಯಾದಗಿರ ವೇದಿಕೆಯ ಮೇಲೆ ಇದ್ದರು. ಇದೆ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಜಲ ಜೀವನ ಮಿಷನ್ (ಎಎಒ)ನಲ್ಲಿ ಸಾಧನೆಗೈದ ಕುಮಸಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಧರ ಪಾಟೀಲ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು. ಪ್ರವಚನ ಪಟುಗಳಾದ ಕೊಪ್ಪಳದ ಸಿದ್ದೇಶ್ವರ ಶಾಸ್ತ್ರೀಗಳು ಪ್ರವಚನ ಗೈದು ಜ್ಞಾನದ ಬೆಳಕನ್ನು ಚೆಲ್ಲಿದರು. ಕಲಾವಿದರಾದ ಹಣಮಂತ ಕುಮಾರ, ಮಲ್ಲಿಕಾರ್ಜುನ
ವರನಾಳ, ಅಭಿಲಾಶ ಮಠಪತಿ ಸಂಗೀತ ಸೇವೆ ಸಲ್ಲಿಸಿದರು. ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸ್ವಾಗತಿಸಿದರು ರವಿಕುಮಾರ ಶಹಾಪುರಕರ್ ನಿರೂಪಿಸಿದರು. ವಿನೋದ ಮಾಳಾ ವಂದಿಸಿದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ ಪಾಟೀಲ, ಗುರುಶಾಂತ ಓಗಿ, ಶಿವಲಿಂಗಪ್ಪ ಮಾಳಾ, ಶಿವಶರಣಪ್ಪ ಹಿರೇಮನಿ, ಸೂರ್ಯಕಾಂತ ಚನ್ನಬಟ್ಟಿ,ಬಸವರಾಜ ಕುರಕೋಟಿ,
ಗುರು ಹಾಂವಾ, ಶರಣು ಹಂಗರಗಿ, ಮಹೇಶ ಬೀರನಳ್ಳಿ, ಶರಣಬಸಪ್ಪ ಮಚೆಟ್ಟಿ, ನಾಗಿಂದ್ರಪ್ಪ ದೇಗಲಮಡ್ಡಿ, ನಾಗಣ್ಣ ಚವಾಡಾಪುರ್, ಮಹಾಂತಯ್ಯ್ ಬಾಳ್ಳಿ, ರಾಜಶೇಖರ ಪಾಟೀಲ ಸೇರಿದಂತೆ ಗ್ರಾಮದ ಅನೇಕ ಜನ ಭಾಗವಹಿಸಿದರು.