
ಭಾಲ್ಕಿ:ಫೆ.27: ತಾಲೂಕಿನ ಏಣಕೂರು ಗ್ರಾಮದ ಹೊರವಲಯದಲ್ಲಿರುವ ಶ್ರೀ ಸಿಮಿ ಲಕ್ಷ್ಮಿ ದೇವಾಲಯದಲ್ಲಿ ಕಾಶಿನಾಥ ಬಾಬಾ ಮಹಾರಾಜ ಅವರ ಪ್ರವಚನ ಕಾರ್ಯಕ್ರಮ ನೆರವೇರಿತು.
ತೆಲಂಗಾಣ ಪಂಚಲಿಂಗೇಶ್ವರ ತಪೆÇೀಭೂಮಿಯ ಪೂಜ್ಯರಾದ ಕಾಶಿನಾಥ ಬಾಬಾ ಮಹಾರಾಜರು ಧಾರ್ಮಿಕ ಉಪನ್ಯಾಸ ನೀಡಿ ಭಕ್ತರಿಗೆ ಮಾರ್ಗದರ್ಶನ ಮಾಡಿದರು.
ಏಣಕೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಹಭಾಗಿತ್ವದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಭವ್ಯ ಲಕ್ಷ್ಮೀ ಮಾತೆಯ ದೇವಸ್ಥಾನದಲ್ಲಿ ಇತ್ತೀಚೆಗೆ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಗಳು ನಡೆದಿದ್ದು, ಅದರ ಅಂಗವಾಗಿ ಈ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮನುಷ್ಯನಿಗೆ ಆಸ್ತಿ-ಅಂತಸ್ತು ಎಷ್ಟೇ ಇದ್ದರೂ ಮಾನಸಿಕ ನೆಮ್ಮದಿ ಅತ್ಯಂತ ಮುಖ್ಯ. ಆ ನೆಮ್ಮದಿಯನ್ನು ಪಡೆಯಲು ಆತ್ಮಚಿಂತನೆ, ಭಕ್ತಿ ಮತ್ತು ಸತ್ಸಂಗ ಅಗತ್ಯವೆಂದು ಗಣೇಶಾನಂದ ಮಹಾರಾಜ ಅವರು ಆಶೀರ್ವಚನದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಗೌರವಾಧ್ಯಕ್ಷ ರಾಜಕುಮಾರ ಮಾನಕಾರ, ಅಧ್ಯಕ್ಷ ಗುರುಬಸಯ್ಯಾ ಸ್ವಾಮಿ, ಬಸವರಾಜ ಹಚ್ಚೆ, ಚನ್ನಬಸಪ್ಪ ಹಚ್ಚೆ, ಭೀಮಣ್ಣ ಮಾನಕಾರ, ರಮೇಶ್ ವಡಗೆ, ಮನೋಹರ ಹೋಗಾಡ, ರವಿ ಗೂರ್ಟೆ, ರವಿ ತುಂಬಾ, ಸಂತೋಷ ತಳವಾಡೆ, ಸಂಗಮೇಶ ಅಲಶೆಟ್ಟಿ, ಬಾಬುರಾವ ಹಚ್ಚೆ, ಅನಿಲ ಪಾಟೀಲ, ಸೋಮನಾಥ ಕೂನಗುತ್ತೆ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.



























