
ಕಲಬುರಗಿ.ಮೇ.21: 371ನೇ(ಜೆ) ಕಲಂ ದಶಮಾನೋತ್ಸವ ಆಚರಣೆಗೆ ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ ಸೇರಿದಂತೆ ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಸರಣಿ ಸಭೆಗಳನ್ನು ನಡೆಸಲಾಗುವದೆಂದು ಹೋರಾಟ ಸಮಿತಿಯ ಗೌರವ ಅಧ್ಯಕ್ಷರಾದ ಬಸವರಾಜ ದೇಶಮುಖ ಹಾಗೂ ಸಂಸ್ಥಾಪಕ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿಯವರು ತಿಳಿಸಿದ್ದಾರೆ.
ಈಗಾಗಲೇ ಕಲಬುರಗಿಯ ಶಿಕ್ಷಣ ಸಂಸ್ಥೆಗಳ ಪ್ರಮುಖರ ಸಭೆ ನಡೆಸಿ, 371ನೇ(ಜೆ) ಕಲಂ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಸಚಿವರಾದ ಪ್ರಿಯಾಂಕ ಖರ್ಗೆಯೊಂದಿಗೆ ಸಮಾಲೋಚನೆ ಸಭೆ ನಡೆಸಿ ಸಮಾವೇಶದ ಸ್ಪಷ್ಟತೆಯ ಬಗ್ಗೆ ರೂಪ ರೇಷೆಗಳನ್ನು ರಚಿಸಲಾಗಿದೆ. ಅದರಂತೆ, ಹಂತ ಹಂತವಾಗಿ ಸಭೆಗಳನ್ನು ನಡೆಸಿ ಇದಕ್ಕೆ ಸಂಬಂಧಪಟ್ಟಂತೆ ಅರಿವು ಮೂಡಿಸಲು ಏಳು ಜಿಲ್ಲೆಗಳಲ್ಲಿ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ನಡೆಸಲು ಸಮಿತಿಯಿಂದ ಕಾಲಮಿತಿ ಯೋಜನೆ ರೂಪಿಸಲಾಗುವುದೆಂದು ತಿಳಿಸಿದರು.
ಪೆÇ್ರ. ಆರ್.ಕೆ. ಹುಡಗಿ ಅಬ್ದುಲ್ ಮನ್ನನ್ ಶೇಠ, ಡಾ.ಬಸವರಾಜ ಕುಮನೂರ, ಡಾ. ಬಿ.ಎಸ್. ಗುಲಶೆಟ್ಟಿ, ಮನೀಷ್ ಜಾಜು, ಕೈಲಾಸನಾಥ ದೀಕ್ಶಿತ್, ರಾಘವೇಂದ್ರ ದೇಶಪಾಂಡೆ, ಅಶೋಕ ಕುಮಾರ ಮಣ್ಣೂರ, ಡಾ.ಶಂಕ್ರೆಪ್ಪ ಶೆಟ್ಟಿ,ಡಾ. ಸೈಯದ ಸನಾವುಲ್ಲಾ, ದೊಡ್ಡಪ್ಪ ಎಸ್. ನಿಷ್ಟಿ, ಕುಮಾರ ಸ್ವಾಮಿ, ಎಂ.ಬಿ. ನಿಂಗಪ್ಪ, ಕಲ್ಯಾಣರಾವ್, ಡಾ. ಮಾಜಿದ್ ದಾಗಿ, ಡಾ. ದತ್ತಾತ್ರೇಯ ಇಕ್ಕಳಕಿ, ಸೈಯದ್ ರೌಫ್ ಖಾದ್ರಿ, ಅಸ್ಲಂ ಚೌಂಗೆ, ರಾಜು ಜೈನ್, ಮೋಹನ ಕಟ್ಟಿಮನಿ, ಡಾ. ಮಂಜೂರ ಡೆಕ್ಕನಿ, ಡಾ. ಎಂ.ಕೆ. ಬಿರಾದಾರ, ಡಾ.ಶ್ರೀಕಾಂತ ಕೆ., ಡಾ. ಮಹೇಶ ಸಂಗನೂರ ಸೇರಿದಂತೆ ಅನೇಕ ಪರಿಣಿತ ತಜ್ಞರು ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದರು. ಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸಿದರು.