ಬೀದರ:ಅ.11: ಜಿಲ್ಲಾ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಶಶಿಕಾಂತ ಎಸ್.ಶೆಂಬೆಳ್ಳಿ ಅವರಿಗೆ ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರ ಮಹಾಶೈವ ಧರ್ಮಪೀಠದಿಂದ ಆ. 9ರಂದು “ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಪತ್ರಿಕಾ ಭೂಷಣ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಪ್ರಶಸ್ತಿಯ ಮೊತ್ತ ರೂ. 51 ಸಾವಿರ ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮಹಾಶಿವ ಗುರುಪೌರ್ಣಿಮೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಧರ್ಮಪೀಠದ ಮುಖ್ಯಸ್ಥರಾದ ಮುಕ್ಕಣ್ಣ ಕರಿಗಾರ ಹಾಗೂ ಅವರ ಸಂಸ್ಥಾನದ ಪ್ರಮುಖರು ಈ ಪ್ರಶಸ್ತಿ ಪ್ರದಾನ ಮಾಡಿದರು. ಇವರ ಜೊತೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಧರ್ಮಪೀಠ ನೀಡಿರುವ ಈ ಪ್ರಶಸ್ತಿಯನ್ನು ಶಶಿಕಾಂತ ಶೆಂಬೆಳ್ಳಿಯವರು ತಮ್ಮ ಅಜ್ಜ-ಅಜ್ಜಿಯರಾದ ಸಿದ್ರಾಮಪ್ಪ ದಿ. ಗುಂಡಮ್ಮಾ, ದಿ. ವೀರಪ್ಪ ಕಾಶಮ್ಮ, ತಂದೆ ದಿ. ಸಂಗ್ರಾಮಪ್ಪ ತಾಯಿ ಸುಲೋಚನಾ, ಮಡದಿ ಮಕ್ಕಳು ಹಾಗೂ ಡೆಕ್ಕನ್ ಹೆರಾಲ್ಡ್ ಮಾಲಿಕರಾದ ಕೆ.ಎನ್.ತಿಲಕ್‍ಕುಮಾರ, ಕೆ.ಎನ್ ಶಾಂತಕುಮಾರ, ಪತ್ರಿಕೋದ್ಯಮದ ಗುರುಗಳಾದ ದೇವು ಪತ್ತಾರ್, ಹೃಷಿಕೇಶ ಬಹಾದ್ದೂರ ದೇಸಾಯಿ, ಅಕ್ಕ ವೀಣಾ ದೇಸಾಯಿ, ಹಾಗೂ ಹಿತೈಷಿಗಳಿಗೆ ಈ ಪ್ರಶಸ್ತಿಯನ್ನು ಸಮರ್ಪಣೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಭವಿಷ್ಯದಲ್ಲಿಯೂ ಧರ್ಮಮಾರ್ಗ, ನ್ಯಾಯ ಮಾರ್ಗದಲ್ಲಿ ನಡೆಯಲು ಇನ್ನಷ್ಟು ಶಕ್ತಿ ಕೊಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಶಿಕಾಂತ ಎಸ್.ಶೆಂಬೆಳ್ಳಿ ತಿಳಿಸಿದ್ದಾರೆ.























