
ತಾಳಿಕೋಟೆ:ಜ.೭: ಶ್ರೀ ಎಸ್.ಎಸ್.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆಗೆ ಸೋಮವಾರರಂದು ಡೈಟ್‌ನ ಹಿರಿಯ ಉಪನ್ಯಾಸಕಿ ಶ್ರೀಮತಿ ಗೀತಾ ಕುಲಕರ್ಣಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆಯ ಸಮಾಜ ವಿಜ್ಞಾನ ವಿಷಯದ ಪರೀವಿಕ್ಷಕಿಯರಾದ ಶ್ರೀಮತಿ ಶೈಲಜಾ ಹಳೆಮನಿ ಯವರು ೮ ,೯ ಮತ್ತು ೧೦ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರೀಶೀಲಿಸಿದರು.
ಹಿರಿಯ ಉಪನ್ಯಾಸಕಿಯಾದ ಶ್ರೀಮತಿ ಗೀತಾ ಕುಲಕರ್ಣಿ ಯವರು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ಎಂಬುದು ಜೀವನದಲ್ಲಿ ಬಹಳೇ ಅತ್ಯುತ್ತಮ ಘಟ್ಟ, ಹತ್ತನೇ ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕಗಳಿಸಿ ತಂದೆ ತಾಯಿಗಳಿಗೆ, ಪ್ರೌಢಶಾಲೆಗೆ ಹಾಗೂ ಇಲಾಖೆಗೆ ಗೌರವ ತರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಇನ್ನೋರ್ವ ಶ್ರೀಮತಿ ಶ್ರೀಮತಿ ಶೈಲಜಾ ಹಳೆಮನಿ ಯವರು ಹತ್ತನೇ ತರಗತಿಯ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವುದು, ಬರೆಯುವದು ರೂಡಿ ಮಾಡಿಕೊಳ್ಳಬೇಕು ಮಾಡಬೇಕು, ಎಲ್ಲಾ ವಿದ್ಯಾರ್ಥಿಗಳು ಪಾಸಾಗಬೇಕು ಮರಳಿ ಮನನ ಮಾಡಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಆಶೋಕ ಕಟ್ಟಿ, ಬಿ.ಆಯ್.ಹಿರೇಹೊಳಿ, ಹತ್ತನೇ ತರಗತಿ ವರ್ಗ ಶಿಕ್ಷಕ ಎಸ್.ಸಿ.ಗುಡಗುಂಟಿ, ಎಸ್.ವಿ.ಜಾಮಗೊಂಡಿ, ಎಚ್.ಬಿ.ಪಾಟೀಲ, ಎಮ್.ಎಸ್.ರಾಯಗೊಂಡ, ಎಸ್.ಬಿ.ಸಾಸನೂರ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
























