ಬೀದರ:ಸೆ.14: ನಗರದ ಬಿ.ವಿ.ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದಿಂದ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ – ಸಮಕಾಲೀನ ಸಾಹಿತ್ಯದಲ್ಲಿ ಯುವಕರ ಮಾನಸಿಕತೆ ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಬೀದರ ವಿಶ್ವವಿದ್ಯಾಲಯ ಬೀದರ ಕುಲಪತಿಗಳಾದ ಡಾ. ಬಿ.ಎಸ್. ಬಿರಾದಾರ ಅವರ ಅಮೃತ ಹಸ್ತದಿಂದ ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಾ ಹಿಂದಿ ಭಾಷೆ ಇಡೀ ಭಾರತದ ಸಂವಹನ ಭಾಷೆಯಾಗಿದೆ ಈ ಭಾಷೆಯಿಂದ ಭಾರತದ ಪ್ರತಿಯೊಂದು ರಾಜ್ಯದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನ ಭಾವನೆಗಳನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ ಅದರಿಂದ ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಅಧ್ಯಯನ ಮಾಡಿ ಭಾರತದ ಪರಂಪರೆಯನ್ನು ಪಸರಿಸಬೇಕೆಂದು ಮಾರ್ಮಿಕವಾಗಿ ನುಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಕೇಂದ್ರೀಯ ನಿರ್ದೇಶಕರು ಹಿಂದಿ ಸಂಸ್ಥಾನ ಮೈಸೂರು ಕೇಂದ್ರದ ಡಾ. ರಣಜೀತ ಭಾರತಿ ಅವರು ಮಾತನಾಡುತ್ತಾ ಹಿಂದಿ ಸಾಹಿತ್ಯ ಬಹುದೊಡ್ಡ ಕಾಣಿಕೆಯನ್ನು ಭಾರತ ದೇಶಕ್ಕೆ ನೀಡಿದೆ ಈ ಭಾಷೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತದ ಜನಮನಸ್ಸಿನ ಭಾವನೆಗಳನ್ನು ಒಂದುಗೂಡಿಸಿ ದೇಶದ ಕೀರ್ತಿಯನ್ನು ಉತ್ತರದಿಂದ ದಕ್ಷಿಣಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಹರಡಲು ಕಾರಣೀಭೂತವಾಗಿದೆ ಎಂದು ನುಡಿದರು.
ಪ್ರಮುಖ ಭಾಷಣಕಾರರಾದ, ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರೊ: ಎಸ್.ಕೆ. ಪವಾರ ಅವರು ಮಾತನಾಡುತ್ತಾ ನಮ್ಮ ಹಿಂದಿ ಭಾಷೆ, ಆದಿವಾಸಿ ಜನಾಂಗ, ಬುಡಕಟ್ಟು ಜನಾಂಗ ಹಾಗೂ ಆರಣ್ಯದಲ್ಲಿ ವಾಸ ಮಾಡುವ ಸೋಲಿಗ ಜನಾಂಗದವರನ್ನು ಸಹ ಭಾರತ ದೇಶದ ಭವ್ಯತೆಗೆ ಹಿಡಿದ ಕನ್ನಡಿ ಹಿಂದಿ ಭಾಷೆಯಾಗಿದೆ ಈ ಭಾಷೆಯು ಮಾನವನ ಹೃದಯಲ್ಲಿ ವಾಸವಾಗಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆ ಈ ಭಾಷೆ ಕಲಿತಾಗ ಸರ್ವಜನರ ಸುಖ ದುಖಗಳನ್ನು ಅರಿತು ಸರ್ವೆಜನ ಸುಖನೋ ಭವಂತು ಎಂಬಂತೆ ಕಲಿತಾಗ ಇದರ ಪ್ರಾಮುಖ್ಯತೆ ಎತ್ತಿಹಿಡಲು ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಿ.ವಿ.ಬಿ. ಮಹಾವಿದ್ಯಾಲಯ ಮತ್ತು ಶಾಲಾ ಕಾಲೇಜುಗಳ ಸಂಚಾಲಕರಾದ ಡಾ. ರಜನೀಶ ಎಸ್. ವಾಲಿಯವರು ಮಾತನಾಡುತ್ತಾ ಹಿಂದಿ ಭಾಷೆ ಅತ್ಯಂತ ಪುರಾತನ ಭಾಷೆ ಈ ಭಾಷೆಯಿಂದ ಭಾರತದ ಪ್ರಜೆ ಯಾವುದೇ ರಾಜ್ಯದಲ್ಲಿ ಪ್ರವಾಸ ಮಾಡಿ ಅಲ್ಲಿನ ಗತವೈಭವವನ್ನು ತಿಳಿದುಕೊಂಡು ನಮ್ಮ ಭಾರತದ ಭವ್ಯ ಸಂಸ್ಕøತಿಯನ್ನು ಇಂದಿನ ವಿದ್ಯಾರ್ಥಿಗಳು ಅರಿತು ವಿದೇಶಗಳಲ್ಲಿ ಸಹ ಹಿಂದಿ ಭಾಷೆಯ ಜನಜಾಗೃತಿಯನ್ನು ಮೂಡಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ವಿಚಾರ ಸಂಕಿರಣದಲ್ಲಿ ಭಾರತದ ವಿವಿಧ ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳಿಂದ ಸುಮಾರು 148 ಪ್ರೌಢ ಪ್ರಬಂಧಗಳು ಬಂದಿರುತ್ತವೆ.
ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕ ನುಡಿಯನ್ನು ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ದೀಪಾ ರಾಗ ನಡೆಸಿಕೊಟ್ಟರು,
ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಗೀತೆಯನ್ನು ಶ್ರೀಮತಿ ರೇಣುಕಾ ಮಳ್ಳಿ ಹಾಡಿದರೆ, ಸ್ವಾಗತವನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ.ವಿಠ್ಠಲ ರಡ್ಡಿ ನಡೆಸಿಕೊಟ್ಟರೆ, ಕಾರ್ಯಕ್ರಮದ ಸಂಚಾಲನೆಯನ್ನು ಶ್ರೀ ಮಾರುತಿ ಭೀಮಣ್ಣಾ ಮಾಡಿದರೆ, ವಂದನೆಯನ್ನು ಶ್ರೀ ನೂರ ಪಾಶಾ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಭಾರತದ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯದಿಂದ, ಮಹಾವಿದ್ಯಾಲಯದಿಂದ ಅನೇಕ ಪ್ರತಿನಿಧಿಗಳು ಆಗಮಿಸಿದ್ದರು, ಮಹಾವಿದ್ಯಾಲಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಎನ್.ಎಸ್.ಎಸ್., ಎನ್.ಸಿ.ಸಿ. ಹಾಗೂ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.























