
ಅಫಜಲಪುರ: ಫೆ.16:ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್, ಮಲ್ಲಾಬಾದ ಇವರ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಅಸ್ಪೃಶ್ಯತಾ ನಿರ್ಮೂಲನಾ ವಿಚಾರಗೋಷ್ಠಿ, ಕಾರ್ಯಗಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವು ಫೆ. 20ರಂದು ಅಫಜಲಪುರ ಪಟ್ಟಣದ ತಹಸೀಲ ಕಚೇರಿ ಎದುರುಗಡೆಯಿರುವ ಸರಕಾರಿ ಪ್ರೌಢ ಶಾಲೆ ಆವರಣದ ಗುರುಭವನದಲ್ಲಿ ಮುಂಜಾನೆ 10:30 ಗಂಟೆಗೆ ನಡೆಯಲಿದೆ ಎಂದು ಟ್ರಸ್ಟ್ ಅದ್ಯಕ್ಷ ಯಲ್ಲಪ್ಪ ದೊಡ್ಡಮನಿ ತಿಳಿಸಿದರು.
ಕಾರ್ಯಕ್ರಮವನ್ನು ಶಾಸಕ ಎಂ.ವೈ. ಪಾಟೀಲ ಉದ್ಘಾಟಿಸಲಿದ್ದು, ಫೆÇೀಟೋಯಳ ಪೂಜೆಯನ್ನು ಮಾಜಿ ಸಚಿವ ಮಾಲಿಕಯ್ಯ ವಿ. ಗುತ್ತೇದಾರ ನೆರವೇರಿಸಲಿದ್ದಾರೆ. ಸಂವಿಧಾನ ಪ್ರಸ್ತಾವನೆ ಬಿಡುಗಡೆ ಕಾರ್ಯಕ್ರಮವನ್ನು ಮಾಜಿ ಜಿ.ಪಂ. ಅಧ್ಯಕ್ಷ ನಿತೀನ್ ವಿ. ಗುತ್ತೇದಾರ ನಡೆಸಲಿದ್ದು, ಕ.ಪ್ರ ಪ್ರಕಟಣೆಯನ್ನು ಕ.ಕ.ರ.ಸಾ. ಸಂಸ್ಥೆ ಕಲಬುರಗಿ ಅಧ್ಯಕ್ಷ ಅರಣಕುಮಾರ ಎಂ. ಪಾಟೀಲ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ತಹಶೀಲ್ದಾರ ಹಾಗೂ ತಾಲೂಕು ದಂಡಾಧಿಕಾರಿ ಸಂಜುಕುಮಾರ ದಾಸರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ, ತಾ.ಸ.ಕ.ಇ. ಸಹಾಯಕ ನಿರ್ದೇಶಕರು ಅಶೋಕ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಇರ್ಪಣ್ಣ ಗುಡಮಿ, ಪುರಸಭೆ ಮುಖ್ಯಾಧಿಕಾರಿ ಫಕ್ರೋದ್ದೀನ್, ಸಿ.ಪಿ.ಐ. ಚನ್ನಯ್ಯ ಹಿರೇಮಠ, ಪಿ.ಎಸ್.ಐ. ಸೋಮಲಿಂಗ ಒಡೆಯರ್, ಕೋಲಿ ಕಬ್ಬಲಿ ಎಸ್.ಟಿ. ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ, ಸಮಾಜ ಸೇವಕ ಜೆ.ಎಂ. ಕೊರಬು ಹಾಗೂ ಯುವ ಮುಖಂಡ ರವಿ ಶೆಟ್ಟಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ಭಾ. ದೊಡ್ಡಮನಿ ವಹಿಸಲಿದ್ದಾರೆ. ಸಮಾಜದಲ್ಲಿ ಸಮಾನತೆ, ಬಾಂಧವ್ಯ ಹಾಗೂ ಅಸ್ಪೃಶ್ಯತಾ ನಿರ್ಮೂಲನೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಪ್ರಕಟಣೆಯಲ್ಲಿ ಕೋರಿದ್ದಾರೆ.



























