
ಸೇಡಂ,ಜೂ,22: ದೇಶದ ಬೆನ್ನೆಲುಬಾಗಿರುವ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸರ್ಕಾರದ ಆತ್ಮನಿರ್ಭರತಾ ಯೋಜನೆಯಡಿ ಉಚಿತ ಬೀಜ ವಿತರಣೆ ಮೂಲಕ ರೈತರ ಆದಾಯ ವೃದ್ಧಿಗೆ ಆತ್ಮನಿರ್ಭರತಾ ಯೋಜನೆ ಸಹಕಾರಿಯಾಗಲಿದೆ ಎಂದು ಟಿಎಪಿಸಿಎಮ್‍ಎಸ್ ಮಾಜಿ ಅಧ್ಯಕ್ಷರಾದ ಮಹೇಶ ಪಾಟೀಲ ತರನಳ್ಳಿ ಅಭಿಪ್ರಾಯಪಟ್ಟರು. ತಾಲೂಕಿನ ತರನಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ 2026-27 ಸಾಲಿನ ಆತ್ಮನಿರ್ಭರತಾ ಅಭಿಯಾನ ಯೋಜನೆಯಡಿ ರೈತರಿಗೆ ಉಚಿತ ಬಿತ್ತನೆ ಬೀಜಗಳ ಕಿರುಚೀಲ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.ಕೃಷಿ ಇಲಾಖೆ ಅಧಿಕಾರಿಗಳಾದ ಬಸವರಾಜ ಕೊಡಸಾ ಮಾತನಾಡಿದರು. ಈ ವೇಳೆಯಲ್ಲಿ ಗ್ರಾಮಸ್ಥರು ಇದ್ದರು.





























