
ಸೇಡಂ, ಸೆ ,೦೯: ೨೦೨೬/೨೭ ಸಾಲಿನ ಶಿಕ್ಷಕರ ದಿನಾಚರಣೆ ಹಾಗೂ ಹಿರಿಯ ಮುಖಂಡರಾದ ಗಣಪತರಾವ ಚಿಮ್ಮನಚೋಡಕರ್ ರವರ ಅಮೃತ ಮಹೋತ್ಸವದ ನಿಮಿತ್ತವಾಗಿ ಸೇಡಂ ತಾಲೂಕಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸತ್ಯ ಯುಗ ಫೌಂಡೇಶನ್, ಬೈ ಯುರೇನ್ ನಮಃ ಟ್ರಸ್ಟ್ ಸೇಡಂ ವತಿಯಿಂದ ಶಿಕ್ಷಕರು ಸತ್ಯಯುಗದ ನಿರ್ಮಾಪಕರು ಶೀರ್ಷಿಕೆಯ ಅಡಿಯಲ್ಲಿ ಆಯೋಜಿಸಿದ್ದ ಆದರ್ಶ ಶಿಕ್ಷಕರು ಹೇಗಿರಬೇಕು ಎಂಬ ವಿಷಯದಡಿಯಲ್ಲಿ ಸ್ಪರ್ಧೆಯಲ್ಲಿ, ಸರಕಾರಿ ಪ್ರಾಥಮಿಕ ಶಾಲಾ ವಿಭಾಗದಿಂದ ಸೇಡಂ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತುರನೂರನ ಮುಖ್ಯಗುರುಗಳಾದ ಮುರಗೆಪ್ಪ ಆರ್ ಹೆಚ್ ಹಣಮನಹಳ್ಳಿ, ಶ್ರೀಮತಿ ಅನಿತಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೂಡಾ ಬಿ. ಶಾಲೆಯ ಶ್ರೀಮತಿ ಅನಿತಾ ಮತ್ತು ಶ್ರೀಮತಿ ಪ್ರಿಯಾಂಕಾರವರು ಉತ್ತಮ ಪ್ರಶಸ್ತಿಗೆ ಆಯ್ಕೆಯಾಗಿದ್ದು ಸೇಡಂ ತಾಲೂಕ ಶಿಕ್ಷಣ ಇಲಾಖೆ ಆಯೋಜಿಸುವ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸೂರ್ಯನಾರಯಣ.ಜಿ. ಚಿಮ್ಮನಚೋಡಕರ್. ಕಾರ್ಯದರ್ಶಿಗಳು ಸತ್ಯ ಯುಗ ಫೌಂಡೇಶನ್,ಬೈ ಯುರೇನ್ ನಮಃ ಟ್ರಸ್ಟ್ ಸೇಡಂರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























