ಪಂದ್ಯಾವಳಿಗೆ ವಿದ್ಯಾರ್ಥಿಗಳ ಆಯ್ಕೆ


ಧಾರವಾಡ,ಜ. ೨: ಧಾರವಾಡದ ಶ್ರೀ ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ೬೯ ನೇ ರಾ?À್ಟ್ರಮಟ್ಟದ ೧೪ ವ?Àð ವಯೋಮಿತಿಯ ಬಾಲಕರ ಶೂಟಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿಯು ಜನೆವರಿ ೫, ೨೦೨೬ ರಿಂದ ಜನೆವರಿ ೯, ೨೦೨೬ ರವರೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡಯುವ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ.


ಆಯ್ಕೆಯಾದ ವಿದ್ಯಾರ್ಥಿ ನವೀನಕುಮಾರ ಚವಾಣ, ಪ್ರಸನ್ನ ಯಾದವ, ಮೊಹಮ್ಮದ್ ಹ್ಯಾರಿಸ್ ಮದರಖಂಡಿ ಹಾಗೂ ವಿವೇಕ ಬೋರಳಕರ ಅವರನ್ನು ಶ್ರೀ ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ಅಧ್ಯಕ್ಷರು ಹಾಗೂ ಬೆಳಗಾವಿ ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕ ಚೇತನಕುಮಾರ ರಾಠೋಡ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಗುಂಜನ್ ಆರ್ಯ, ಆಡಳಿತ ಮಂಡಳಿಯ ಸದಸ್ಯರು, ಶಾಲೆಯ ಪ್ರಾಚಾರ್ಯರು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.