
ಕಲಬುರಗಿ,ಮೇ. 23: ಬೀದರ್ ವಿಶ್ವ ವಿದ್ಯಾಲಯದ ಸ್ನಾತಕ ಪದವಿಯ ಬಿಎ ದ್ವಿತೀಯ ಸೆಮೆಸ್ಟರ್ ಸಾಮಾನ್ಯ ಕನ್ನಡ ಪಠ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿ ಎಸಕೆಎನಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಮುಮ್ತಾಜ್ ಬೇಗಂ ಅವರ ಅರಿವಿನ ಬೆಳಕು, ದೇವರು, ಕಬಂಧಬಾಹುಗಳು ಬೇಕಿಲ್ಲ ಸೇರಿದಂತೆ ಐದು ಕವನಗಳು ಆಯ್ಕೆಯಾಗಿವೆ.
ಬೇಸಿಕ್ ಕನ್ನಡ ಪಠ್ಯಕ್ರಮಕ್ಕೆ ಇವರ ಐದು ಕವನಗಳನ್ನು ವಿಶ್ವ ವಿದ್ಯಾಲಯ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಸಾಮಾಜಿಕ ಸಾಮರಸ್ಯಕ್ಕೆ ಸ್ಪೂರ್ತಿ ತುಂಬುವ ಲೇಖಕಿ ಡಾ. ಮುಮ್ತಾಜ್ ಬೇಗಂ ಅವರ ಕವನಗಳು ವಿಶ್ವವಿದ್ಯಾಲಯ ಪಠ್ಯಕ್ರಮಕ್ಕೆ ಆಯ್ಕೆ ಮಾಡಿದ್ದಕ್ಕೆ ಸಾಹಿತ್ಯಾಸಕ್ತರು ಸಂತಸವ್ಯಕ್ತಪಡಿಸಿದ್ದಾರೆ.