
ನವಲಗುಂದ,ನ17: ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಮಂಡ್ಯ ಹಾಗೂ ಶ್ರೀ ಆದಿಚುಂಚನಗಿರಿ ಮಾಹಾಸಂಸ್ಥಾನ ಮಠ ನಾಗಮಂಗಲ, ತಾಲ್ಲೂಕು ಇವರುಗಳ ಸಂಯುಕ್ತ ಆಶ್ರಯದಲ್ಲಿ 14 ಮತ್ತು 16 ವಯೋಮಿತಿಯ ಬಾಲಕ/ಬಾಲಕಿಯರಿಗಾಗಿ ನಡೆದ ರಾಜ್ಯ ಮಟ್ಟದ ಯೋಗಾ ಒಲಂಪಿಯಾಡ್ (ಓಅಇಖಖಿ) ಯೋಗಾಸನ ಸ್ಪರ್ಧೆಯಲ್ಲಿ ನವಲಗುಂದ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಾದ ರೋಹಿತಗೌಡ ಭರಮಗೌಡ್ರ ಹಾಗೂ ಸಂತೋಷ ಮಳಲಿಯವರು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಈ ವಿದ್ಯಾರ್ಥಿಗಳ ಸಾಧನೆಯನ್ನು ತರಬೇತಿ ನೀಡಿದಂತಹ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ಅಣ್ಣಿಗೇರಿ, ಪ್ರಾಂಶುಪಾಲರಾದ ರಮೇಶ ಕಬ್ಬೇರಳ್ಳಿ, ದೈಹಿಕ ಶಿಕ್ಷಣ ವಿಷಯ ಪರೀವಿಕ್ಷ ಎನ್.ವಿ ಕುರವತ್ತಿಮಠ ಜಿಲ್ಲಾ ಸಮನ್ವಯಾಧಿಕಾರಿ ಮಹಾದೇವ ಹುಲಗೆಜ್ಜಿ, ಕ್ಷೇತ್ರಶಿಕ್ಷಣಾಧಿಕಾರಿ ಯು.ವ್ಹಾ ಬೋಮ್ಮಕ್ಕನ್ನವರ, ಹಿಂದುಳಿದ ವರ್ಗಗಳ ಕಲ್ಯಾಣಯ ಇಲಾಖೆಯ ಜಿಲ್ಲಾ ಅಧಿಕಾರಿ ಎಚ್ ಭಾನುಮತಿ ಹಾಗೂ ವಸತಿ ಶಾಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಪಾಲಕ/ಪೆÇೀಷಕರು ಮೆಚ್ಚಿ ಅಭಿನಂದಿಸಿದ್ದಾರೆ.























