ಸೇಡಂ: ವ್ಯಕ್ತಿ ಕೊಲೆ-ಆರೋಪಿ ಸೆರೆ

ಸೇಡಂ,ಸೆ.9-ಪಟ್ಟಣದ ಉಡಗಿ ರೋಡ್ ಹತ್ತಿರ ಸೋಮವಾರ ರಾತ್ರಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ಪೆÇೀಲಿಸರು ಬೆಳಿಗ್ಗೆ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಸೇಡಂ ನಿವಾಸಿ ಲಾರಿ ಚಾಲಕ ರಿಯಾಜ್ ತಂದೆ ಶೇಖಲಾಲ್ (43) ಎಂಬಾತನನ್ನು ಸೋಮವಾರ ರಾತ್ರಿ 3.30 ಕ್ಕೆ ವಾಸವದತ್ ಸಿಮೆಂಟ್ ಕಾರ್ಖಾನೆಯಿಂದ ಮನೆಗೆ ತೆರಳುವ ಸಮಯದಲ್ಲಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಜೇಹಿರ್ ತಂದೆ ಶಾಬೋದಿನ್ ಹೈಯಾಳ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳಕ್ಕೆ ಸೇಡಂ ಪಿಎಸ್‍ಐ ಉಪೇಂದ್ರಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇಡಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.