ಪಾಕ್ ಉಗ್ರರ ಮೇಲೆ ಭದ್ರತಾಪಡೆ ಹದ್ದಿನ ಕಣ್ಣು

ಶ್ರೀನಗರ,ಡಿ.೨- ಗಡಿ ನಿಯಂತ್ರಣ ರೇಖೆಯಾದ್ಯಂತ ೬೯ ಲಾಂಚ್‌ಪ್ಯಾಡ್‌ಗಳಲ್ಲಿ ಸುಮಾರು “೧೨೦ ಪಾಕಿಸ್ತಾನದ ಭಯೋತ್ಪಾದಕರಿದ್ದು ಅವರ ಮೇಲೆ ಭದ್ರತಾ ಪಡೆಗಳು ತೀವ್ರ ನಿಗಾ ಇರಿಸಿವೆ ಎಂಬ ಆಘಾತಕಾರಿ ಸಂಗತಿಯನ್ನು ಭದ್ರತಾ ಪಡೆಗಳು ಹೊರಹಾಕಿವೆ.

ಪಾಕಿಸ್ತಾನ ಯಾವುದೇ “ದುಸ್ಸಾಹಸ”ಕ್ಕೆ ಪ್ರಯತ್ನಿಸಿದರೆ ಆಪರೇಷನ್ ಸಿಂಧೂರ್ ಮುಂದುವರಿಯಲಿದೆ ಎಂದು ಬಿಎಸ್‌ಎಫ್ ಕಾಶ್ಮೀರ ಗಡಿನಾಡು ಐಜಿ ಅಶೋಕ್ ಯಾದವ್ ಹೇಳಿದ್ದಾರೆ.

ಮೇ ೭ ಮತ್ತು ಮೇ ೧೦ ರ ನಡುವೆ ಭಾರತೀಯ ವಾಯು ಮತ್ತು ಫಿರಂಗಿ ದಾಳಿಯ ನಂತರ, ಏಪ್ರಿಲ್ ೨೨ ರಂದು ೨೬ ನಾಗರಿಕರನ್ನು ಕೊಂದ ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಆಪ್ ಸಿಂಧೂರ್ ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಿದ ನಂತರ, ಪಾಕಿಸ್ತಾನ ಹಲವಾರು ಲಾಂಚ್ ಪ್ಯಾಡ್‌ಗಳನ್ನು ತನ್ನ ಪ್ರದೇಶದೊಳಗೆ ಸ್ಥಳಾಂತರಿಸಿದೆ ಹೇಳಿದ್ದಾರೆ.

ಗಡಿ ಪಡೆಗಳ ವಾರ್ಷಿಕ ಮಾಹಿತಿ ಕುರಿತು ಮಾಹಿತಿ ನೀಡಿದ ಅವರು “ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರೀ ಹಾನಿಯನ್ನುಂಟುಮಾಡಿದ್ದೇವೆ. ಕೆಲವು ಉಡಾವಣಾ ಪ್ಯಾಡ್‌ಗಳನ್ನು ಮುಂದಿನ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ಸೇನೆ ಮತ್ತು ಬಿಎಸ್‌ಎಫ್‌ನ ಗುಂಡಿನ ವ್ಯಾಪ್ತಿಯಿಂದ ಹೊರಗಿವೆ”,ಗಡಿ ದಾಟಿದರೆ ಅದರ ಪರಿಣಾಮವೇ ಬೇರೆ ಆಗಿರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

“ಪಾಕಿಸ್ತಾನದಿಂದ ಯಾವುದೇ ದುಸ್ಸಾಹಸ ನಡೆದಾಗಲೆಲ್ಲಾ ನಾವು ಸೂಕ್ತ ಪ್ರತ್ಯುತ್ತರ ನೀಡಲು ಸಿದ್ಧರಿದ್ದೇವೆ.”ಮೇ ತಿಂಗಳ ದಾಳಿಯ ಸಮಯದಲ್ಲಿ, ಬಿಎಸ್‌ಎಫ್ ಘಟಕಗಳು ಮತ್ತು ಸೇನಾ ರಚನೆಗಳು ಪಾಕಿಸ್ತಾನಿ ಪೋಸ್ಟ್‌ಗಳು ಮತ್ತು ಲಾಂಚ್ ಪ್ಯಾಡ್‌ಗಳ ಮೇಲೆ “ಭಾರೀ ಮತ್ತು ನಿಖರವಾದ” ಗುಂಡಿನ ದಾಳಿಗಳನ್ನು ನಡೆಸಿವೆ ಎಂದು ಹೇಳಿದ್ದಾರೆ.

ಗಡಿ ಭಾಗದಲ್ಲಿರುವ ಪಾಕಿಸ್ತಾನದ ೬೯ ಭಯೋತ್ಪಾದಕ ಶಿಬಿರಗಳನ್ನು ಗುರುತಿಸಿದ್ದೇನೆ, ಅವುಗಳು ನಮ್ಮ ರಾಡಾರ್ ವ್ಯವಸ್ಥೆ ಅಡಿ ಇವೆ. ಪಾಕಿಸ್ತಾನ ಮತ್ತೊಮ್ಮೆ ತಮ್ಮ ನರಿ ಬುದ್ದಿ ಪ್ರದರ್ಶಿಸಿದರೆ ಭಾರತೀಯ ಭದ್ರತಾ ಪಡೆಗಳು ಈ ಭಾರಿ ಕಳೆದ ಬಾರಿಗಿಂತ ಬಾರಿ ಪ್ರಮಾಣದಲ್ಲಿ ಪ್ರತಿರೋಧ ನೀಡಲಾಗುವುದು ಎಂದಿದ್ದಾರೆ.

ಒಳನುಸುಳುವಿಕೆ ಪ್ರಯತ್ನಗಳಲ್ಲಿ ತೀವ್ರ ಇಳಿಕೆ ಕಂಡುಬಂದಿದೆ ಎಂದು ಹೇಳಿದ ಅವರು ಈ ವರ್ಷ ಕಾಶ್ಮೀರ ಗಡಿಯಲ್ಲಿ ನಾಲ್ಕು ಪ್ರಯತ್ನಗಳು ದಾಖಲಾಗಿದ್ದು, ಎರಡು ಮೊದಲು ಮತ್ತು ಎರಡು ನಂತರ ೧೩ ಒಳನುಸುಳುವವರು ಇದರಲ್ಲಿ ಸೇರಿದ್ದಾರೆ. ಒಳನುಸುಳಲು ಯತ್ನಿಸಿದ “ಎಂಟು ಮಂದಿಯನ್ನು ಸೇನೆ ಹೊಡೆದುರುಳಿಸಿತು, ಐದು ಮಂದಿ ವಾಪಸ್ ಹೋಗಿದ್ದಾರೆ ಎಂದಿದ್ದಾರೆ.