Home ಜಿಲ್ಲೆ ಕಲಬುರಗಿ ಸುರಕ್ಷಿತ ಇಂಟರ್ನೆಟ್ ಬಳಕೆ ಅಗತ್ಯ

ಸುರಕ್ಷಿತ ಇಂಟರ್ನೆಟ್ ಬಳಕೆ ಅಗತ್ಯ

ಕಲಬುರಗಿ :ಫೆ.10: ಇಂಟರ್ನೆಟ್‍ನ ಸುರಕ್ಷಿತ, ನೈತಿಕ ಮತ್ತು ಜವಾಬ್ದಾರಿಯುತ ಬಳಕೆ ಅಗತ್ಯವಾಗಿದೆ. ವಿಶೇಷವಾಗಿ ಮಕ್ಕಳು ಮತ್ತು ಯುವಜನರಲ್ಲಿ ಸೈಬರ್ ಭದ್ರತೆಯ ಜಾಗೃತಿ ಮೂಡಿಸುವುದು ಅವಶ್ಯಕವಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಹಳೆ ಶೆಟ್ಟಿ ಕಾಂಪ್ಲೆಕ್ಸ್ ನಲ್ಲಿನ ‘ಸಮರ್ಥ ಇಂಟರ್ನೆಟ್ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ “ಸುರಕ್ಷಿತ ಇಂಟರ್ನೆಟ್ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು. ಸುರಕ್ಷಿತ ಇಂಟರ್ನೆಟ್ ಬಳಕೆಗಾಗಿ ಖಾತೆಗಳಿಗೆ ಊಹಿಸಲು ಕಷ್ಟಕರವಾದ ಪಾಸ್‍ವರ್ಡ್‍ಗಳನ್ನು ಬಳಸಬೇಕು. ವೈಯಕ್ತಿಕ ದಾಖಲೆಗಳು ಮತ್ತು ಬ್ಯಾಂಕ್ ವಿವರಗಳನ್ನು ಆನ್‍ಲೈನ್‍ನಲ್ಲಿ ಹಂಚಿಕೊಳ್ಳಬಾರದು. ಆಗಾಗ್ಗೆ ಮೊಬೈಲ್, ಲ್ಯಾಪ್‍ಟಾಪ್ ಗಳ ಸಾಫ್ಟ್‍ವೇರ್ ಅಪ್‍ಡೇಟ್ ಮಾಡುತ್ತಿರಬೇಕು. ಅರಿವಿಲ್ಲದ ಲಿಂಕ್‍ಗಳನ್ನು ಕ್ಲಿಕ್ ಮಾಡಬಾರದು ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಿದ್ದು ಪಾಟೀಲ್, ಶಿವಯೋಗೆಪ್ಪಾ ಎಸ್. ಬಿರಾದಾರ,ದತ್ತು, ಶಂಕರ ರಾಠೋಡ, ಅನಿಕೇತ ಸೇರಿದಂತೆ ಅನೇಕರು ಇದ್ದರು.