ದಾಡಗಿ ಸರಕಾರಿ ಪ್ರೌಢ ಶಾಲೆಗೆ ಎಸ್‌ಡಿಎಂಸಿ ರಚನೆಅರವಿಂದ ಎಕ್ಕೆಳ್ಳೆ ಅಧ್ಯಕ್ಷ, ಸರಸ್ವತಿ ಗರುನಾಥ ಮಾಶೆಟ್ಟೆ ಉಪಾಧ್ಯಕ್ಷೆ

ಭಾಲ್ಕಿ : ಅ.೯:ತಾಲೂಕಿನ ದಾಡಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ನೂತನವಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ) ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಅರವಿಂದ ಗೋವಿಂದರಾವ ಎಕ್ಕೆಳ್ಳೆ ಮತ್ತು ಉಪಾಧ್ಯಕ್ಷರಾಗಿ ಸರಸ್ವತಿ ಗರುನಾಥ ಮಾಶೆಟ್ಟೆ ಆಯ್ಕೆಯಾದರು.
ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಶಾಲೆಯ ಮುಖ್ಯಗುರು ಒಜ ಹನೀಫ್ ಸನ್ಮಾನಿಸಿ, ಅಭಿನಂದಿಸಿದರು. ನೂತನ ಅಧ್ಯಕ್ಷ ಅರವಿಂದ ಗೋವಿಂದರಾವ ಮಾತನಾಡಿ, ಶಾಲಾ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅಗತ್ಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಗಣಪತಿ ಧಡ್ಡೆ, ಭದ್ರಪ್ಪ ಭೌರಾ, ನೂತನ ಸದಸ್ಯರಾದ ಭೀಮಾಶಂಕರ ಧಡ್ಡೆ, ಶಾಬುದ್ದೀನ್, ಸುವರ್ಣ, ಲಕ್ಷಿö್ಮಬಾಯಿ ರಾಜಕುಮಾರ, ಸಂಗೀತಾ, ಬಾಬು, ರವೀಂದ್ರ, ಶಿಕ್ಷಕರಾದ ಸತೀಶ ಸಿದ್ದೇಶ್ವರೆ, ರಾಮದಾಸ್, ರೇಖಾ ಸೇರಿದಂತೆ ಹಲವರು ಇದ್ದರು.