ಕಲಬುರಗಿ,ಅ.೫-ಡಾ. ಗೌವಿನೋಲ್ಲಾ ಮಹೇಂದ್ರ, ಸಹ-ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥ್ತ ಡಾ.ಡಿ.ಗೌತಮ್, ಸಹ-ಪ್ರಾಧ್ಯಾಪಕ, ಪ್ರವಾಸೋದ್ಯಮ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್ ವಿಭಾಗ, ಬಿಸಿನೆಸ್ ಅಧ್ಯಯನ ವಿಭಾಗ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇವರನ್ನು ಅಕ್ಟೋಬರ್ ೪ರಿಂದ ೨೧ರವರೆಗೆ ೨೦೨೫ ರವರೆಗೆ ಲಾಟ್ವಿಯಾ ದೇಶದ ವ್ಯಾಲ್ಮಿಯೆರಾನಲ್ಲಿ ಇರುವ ವಿಡ್ಜಿಮೆ ಯುನಿರ್ವಸಿಟಿ ಆಫ್
ಅಪ್ಲೈಡ್ ಸೈನ್ಸಸ್ (ವಿಯುಎಎಸ್) ನಲ್ಲಿ ಎರಾಸ್ಮಸ್ ಸ್ಟಾಫ್ ಮೋಬಿಲಿಟಿ ಪ್ರೋಗ್ರಾಂನಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದ್ದಾರೆ.
ಅವರ ಭೇಟಿಯ ಸಂದರ್ಭದಲ್ಲಿ, ಇಬ್ಬರೂ ಅಧ್ಯಾಪಕರು ಪ್ರಸಿದ್ಧ ಇ³UಆಖಇSಶಿ ವಿಜ್ಞಾನ ಹಬ್ಬ ಮತ್ತು ಅಕ್ಟೋಬರ, ೧೩ ರಿಂದ ೧೭ ೨೦೨೫ ರಂದು ವಾಲ್ಮಿಯೆರೆದಲ್ಲಿ ನಡೆಯಲಿರುವ ೫ನೇ ಅಂತರಾಷ್ಟ್ರೀಯ ವೈಜ್ಞಾನಿಕ ವಿಚಾರ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಅವರು ಸಂಶೋಧನಾ ಪೇಪರ್‌ಗಳನ್ನು ಮಂಡಿಸಿ, ಪ್ರವಾಸೋದ್ಯಮ ಹಾಗೂ ಸಂಬAಧಿತ ಕ್ಷೇತ್ರಗಳ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ, ಶೈಕ್ಷಣಿಕ ವಿನಿಮಯದಲ್ಲಿ ಭಾಗವಹಿಸುವರು. ಯೂರೋಪ್‌ನಲ್ಲಿ ಪ್ರವಾಸೋದ್ಯಮ ನಿರ್ವಹಣಾ ಅಭ್ಯಾಸಗಳ ಅಧ್ಯಯನ, ಸಂಶೋಧನಾ ಯೋಜನೆ ಅನುಷ್ಠಾನ ಹಾಗೂ ವೈಜ್ಞಾನಿಕ ಬರವಣಿಗೆ ವಿಧಾನಗಳನ್ನು ಅಧ್ಯಯನ ಮಾಡಲು ಪ್ರವಾಸಗಳು ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾರೆ.
ಸಿಯುಕೆೆಯ ಗೌರವಾನ್ವಿತ ಉಪಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ವಿಭಾಗದ ಪ್ರಯತ್ನಗಳನ್ನು ಮೆಚ್ಚಿಕೊಂಡು, ಆಹ್ವಾನ ಪತ್ರಗಳನ್ನು ಹಸ್ತಾಂತರಿಸಿದರು ಮತ್ತು ಅಧ್ಯಾಪಕರಿಗೆ ಅವರ ಶೈಕ್ಷಣಿಕ ಮತ್ತು
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಯಶಸ್ಸು ಬಯಸಿದರು. “ಇದು ಸಿಯುಕೆ ಮತ್ತು ವಿಯುಎಎಸ್ ನಡುವೆ ಸಹಿ ಮಾಡಲಾದ ಒoU ದ ನೇರ ಫಲಿತಾಂಶವಾಗಿದ್ದು, ಸಹಕಾರ, ಸಂಯುಕ್ತ ಸಂಶೋಧನೆ ಮತ್ತು ಅಂತಾರಾಷ್ಟ್ರೀಯ ಪ್ರದರ್ಶನವನ್ನು ಉತ್ತೇಜಿಸುತ್ತದೆ” ಎಂದು ಅವರು ಹೇಳಿದರು.
ಕುಲಸಚಿವ ಪ್ರೊ. ಆರ್. ಆರ್. ಬೀರಾದರ ಮತ್ತು ಡೀನ್ ಪ್ರೊ. ಪಾಂಡುರAಗ ವಿ. ಪಟ್ಟಿ ಅಧ್ಯಾಪಕರನ್ನು ಪ್ರೋತ್ಸಾಹಿಸಿ, ಸಂಸ್ಥೆಯ ಬೆಂಬಲದ ಭರವಸೆ ನೀಡಿದರು.
ಆಹ್ವಾನಿತರು ವಿಶ್ವವಿದ್ಯಾಲಯದ ನೇತೃತ್ವಕ್ಕೆ ಮಾರ್ಗದರ್ಶನ ಮತ್ತು ಪ್ರೇರಣೆಗೆ ಧನ್ಯವಾದಗಳ ಸೂಚಿಸಿದರು ಮತ್ತು ಲಾಟ್ವಿಯಾದ ವಿಡ್ಜಿಮೆ ವಿಶ್ವವಿದ್ಯಾಲಯದ ಆತಿಥ್ಯ ಮತ್ತು ಬೆಂಬಲಕ್ಕೆ ಧನ್ಯವಾದ ಹೇಳಿದರು.

























