Home ಜಿಲ್ಲೆ ತುಮಕೂರು ರಾಮನಹಳ್ಳಿ ಶಾಲೆಯಲ್ಲಿ ವಿಜ್ಞಾನ ಮಾದರಿ ವಸ್ತುಗಳ ಪ್ರದರ್ಶನ

ರಾಮನಹಳ್ಳಿ ಶಾಲೆಯಲ್ಲಿ ವಿಜ್ಞಾನ ಮಾದರಿ ವಸ್ತುಗಳ ಪ್ರದರ್ಶನ

ಹುಳಿಯಾರು, ಮಾ. ೭- ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ರಾಮನಹಳ್ಳಿ ಶಾಲೆಯಲ್ಲಿ ಖ್ಯಾತ ಭೌತ ವಿಜ್ಞಾನಿ ಸರ್ ಸಿ.ವಿ.ರಾಮನ್ ರವರ ಹುಟ್ಟುಹಬ್ಬದ ಪ್ರಯುಕ್ತ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.


ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳನ್ನು ತಯಾರಿಸಿಕೊಂಡು ಬಂದು ಪ್ರದರ್ಶಿಸಿ ಅವುಗಳ ವಿವರಣೆಯನ್ನು ನೀಡಿ ತಮ್ಮಲ್ಲಿರುವ ವಿಜ್ಞಾನದ ಪ್ರತಿಭೆಯನ್ನು ಹೊರಹಾಕಿದರು.


ಮಾನವನ ಆಹಾರ ಜೀರ್ಣ ವ್ಯವಸ್ಥೆ, ಉಸಿರಾಟ ಕ್ರಿಯೆ, ಗಾಳಿ ಒತ್ತಡ ಮತ್ತು ಇರುವಿಕೆ, ಬಾಹ್ಯಕಾಶ ಉಡಾವಣೆ ಹೀಗೆ ಹತ್ತು ಹಲವು ವಿಜ್ಞಾನದ ಪ್ರಯೋಗಗಳನ್ನು ಮಕ್ಕಳು ಮಾಡಿ ವಿವರಿಸಿದರು.


ಸರ್ಕಾರಿ ಶಾಲಾ ಮಕ್ಕಳ ಪ್ರತಿಭೆಯನ್ನು ನೋಡಿ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಕಮಲಮ್ಮ, ಉಪಾಧ್ಯಕ್ಷೆ ಪುಷ್ಪ, ಸರ್ವ ಸದಸ್ಯರು, ಶಾಲಾ ಮುಖ್ಯ ಶಿಕ್ಷಕರಾದ ಡಿ.ಕುಮಾರ್, ಸಹ ಶಿಕ್ಷಕರಾದ ಶಶಿಕಲಾ ಜಿ, ಮಂಜುಳ ಬಿ. ಮಮತ, ಉಷಾ. ಪತ್ರಕರ್ತ ಸರ್ವಣ್ಣ ಉಪಸ್ಥಿತರಿದ್ದರು.