
ಕೆ.ಆರ್.ಪುರ,ಡಿ.೩೧- ವಿದ್ಯಾರ್ಥಿಗಳಲ್ಲಿನ ಕೌಶಲ್ಯಗಳ ಅಭಿವೃದ್ಧಿಗೆ ವಿಜ್ಞಾನ ವಸ್ತುಪ್ರದರ್ಶನ ದಂತಹ ವೇದಿಕೆಗಳು ಅವಶ್ಯಕವಾಗಿದ್ದು,ವಿದ್ಯಾರ್ಥಿಗಳ ಕೌಶಲ್ಯಗಳ ಅಭಿವೃದ್ಧಿ, ಜೋತೆಗೆ ವೇದಿಕೆ ಗಳನ್ನು ಕಲ್ಪಿಸಬೇಕೆಂದು ರೇವಾ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ.ಮಂಜುಳಾ ಅವರು ತಿಳಿಸಿದರು.
ಹೆಣ್ಣೂರು ಸಮೀಪದ ಥಣಿಸಂದ್ರದ ಎಸ್.ವಿ.ಎನ್ ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳನ್ನು ಪ್ರಸ್ತುತ ಪ್ರಪಂಚದ ವೇಗ ಹಾಗೂ ತಂತ್ರಿಕತೆಗೆ ಅನುಗುಣವಾಗಿ ಸಿದ್ದಪಡಿಸಬೇಕಿದೆ,ಆ ಮೂಲಕ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಭದ್ರ ಬುನಾದಿ ಹಾಕಬೇಕು ಎಂದು ನುಡಿದರು.
ಕಳೆದ ೨೫ವರ್ಷಗಳಿಂದ ಎಸ್.ವಿ.ಎನ್ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ತಂತ್ರಜ್ಞಾನದ ಯುಗಕ್ಕಾಗಿ ಕೌಶಲಗಳನ್ನು ಅಭಿವೃದ್ಧಿ ಪಡಿಸುತ್ತಾ ಬಂದಿದೆ ಅದರಂತೆ ಮುಂದೆಯೂ ಇದೇ ರೀತಿ ಕಾರ್ಯ ಮುಂದುವರೆಸಲಿ ಎಂದು ಆಶಯ ವ್ಯಕ್ತಪಡಿಸಿದ್ದರು.
ಶಾಲೆಯ ಅಧ್ಯಕ್ಷ ಸುಬ್ಬರಾಜು ಅವರು ಮಾತನಾಡಿ ನಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನಾವು ಹಲವು ನೂತನ ಯೋಜನೆಗಳನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದು,ಮಕ್ಕಳ ಬೆಳವಣಿಗೆಯೊಂದೆ ನಮ್ಮ ಗುರಿ,ಅದರೊಂದಿಗೆ ಬಡಮಕ್ಕಳಿಗೆ ಪ್ರೋತ್ಸಾಹ ಸಹ ನಮ್ಮ ಕರ್ತವ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಇಓ ಗೊವಿಂದಪ್ಪ, ಶಾಲೆಯ ಅಧ್ಯಕ್ಷ ಸುಬ್ಬರಾಜು,ಕಾರ್ಯದರ್ಶಿ ಸುಹಾಸ್, ಡಾ.ಮಂಜುಳಾ ಮತ್ತು ತಂಡ ಉಪಸ್ಥಿತರಿದ್ದರು




























