
ಚಿಂಚೋಳಿ :ಫೆ.22:ಚಂದಾಪುರ ಪಟ್ಟಣದ ಲಿಟಲ್ ಫ್ಲವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮಾಡಲಾಯಿತು.
ಫಾದರ್ ಅಂತೋನಿ ಸೇಲ್ವಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳು ಇಂತಹ ವಿಜ್ಞಾನ ವಸ್ತು ಪ್ರದರ್ಶನದಿಂದ ಮುಂದಿನ ದಿನಗಳಲ್ಲಿ ದೇಶದ
ಪ್ರಸಿದ್ಧ ವಿಜ್ಞಾನಿಗಳು, ಇತಿಹಾಸಕಾರರು, ಡಾಕ್ಟರ್, ಇಂಜಿನಿಯರ್, ಮುಂತಾದವು ಆಗಿ ದೇಶ ಬಲಿಷ್ಠಗೊಳ್ಳಲು ಸಹಾಯವಾಗುತ್ತದೆ ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದ ಪ್ರಾಸ್ತವಿಕ ಮಾತನ್ನು ಪರಮೇಶ್ವರಿ ಮತ್ತು ಸ್ವಾಗತ ಭಾಷಣವನ್ನು ಆಶಾ ಜ್ಯೋತಿಯವರು, ಸುರೇಂದ್ರ ವಂದನಾರ್ಪಣೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಫಾದರ್ ರೂಕ್ಯೂ ನವೀನ ಡಿಸೋಜಾ, ತೀರ್ಪುಗಾರರಾಗಿ ಜೀವನ, ಆನಂದ ರಾಜಶೇಖರ,
ಮುಖ್ಯೋಪಾಧ್ಯಾಯರಾದ
ಸಿಸ್ಟರ್ ಅರ್ಪಿತಾ, ಶಾಲೆಯ ಶಿಕ್ಷಕರಾದ ಸವಿತಾ, ಪ್ರೀತಿ, ಭವಾನಿ, ಪ್ರಮೀಳಾ, ಸವಿತಾ ಆರ್, ವೈಷ್ಣವಿ, ಈರಮ್ಮ, ಸಂತೋಷ, ಮೀನಾಕ್ಷಿ, ಸಂತೋಷ, ಶಿಕ್ಷಕರು, ಹಾಗೂ ಸಿಬ್ಬಂದಿಗಳು, ಪೆÇೀಷಕರು, ಮಕ್ಕಳು ಉಪಸ್ಥಿತರಿದ್ದರು.
























