Home ಜಿಲ್ಲೆ ವಿಜ್ಞಾನ ವಸ್ತು ಪ್ರದರ್ಶನ

ವಿಜ್ಞಾನ ವಸ್ತು ಪ್ರದರ್ಶನ


ಬಾದಾಮಿ,ಮಾ.೨: ವಿಜ್ಞಾನದ ವಿಸ್ಮಯಗಳು ನಮ್ಮ ಜಗತ್ತನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ. ವಿಜ್ಞಾನಿಗಳನ್ನು ಬೆಂಬಲಿಸಿ, ವೈಜ್ಞಾನಿಕ ಅನ್ವೇ?Àಣೆಯ ಜಗತ್ತನ್ನು ಅರಿಯಲು ಅವರಿಗೆ ಅವಕಾಶ ಒದಗಿಸಬೇಕು. ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಆವಿ?Á್ಕರಗಳು & ಜ್ಞಾನ ಕೇಂದ್ರಿತ ಭವ್ಯ ಭವಿ?À್ಯ ನಿರ್ಮಿಸಲು ಸಾಧ್ಯವಿದೆ ಎಂದು ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಬಿ.ಟಿ.ಹಳ್ಳಿ ಹೇಳಿದರು.
ಅವರು ತಾಲೂಕಿನ ಖ್ಯಾಡ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ವಿಜ್ಞಾನ ದಿನದ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ವಿಜ್ಞಾನವನ್ನು ಸಂಭ್ರಮಿಸಿ, ಜಗತ್ತಿನ ವಿಸ್ಮಯಗಳನ್ನು ಅರಿತುಕೊಳ್ಳಲು & ಮಾನವ ಜನಾಂಗಕ್ಕೆ ನೆರವಾಗಬಲ್ಲ ಹೊಸ ಅನ್ವೇ?Àಣೆಗಳನ್ನು ನಡೆಸಲು ಮುಂದಿನ ತಲೆಮಾರುಗಳಿಗೆ ಸ್ಫೂರ್ತಿ ನೀಡುವ ಅಗತ್ಯತೆಯಿದೆ. ಸರ್ ಸಿ.ವಿ.ರಾಮನ್ ಅವರು ಸಂಶೋಧಿಸಿದ ರಾಮನ್ ಪರಿಣಾಮ ಒಂದು ಅಸಾಧಾರಣ ವೈಜ್ಞಾನಿಕ ಅನ್ವೇ?Àಣೆಯಾಗಿದ್ದು, ಭೌತಶಾಸ್ತ್ರದ ಕ್ಷೇತ್ರದಲ್ಲಿ ಅತ್ಯಂತ ಮಹತ್ತರವಾದ ಪ್ರಭಾವವನ್ನು ಬೀರಿದೆ. ವಿಜ್ಞಾನ ಕ್ಷೇತ್ರಕ್ಕೆ ಸರ್ ಸಿ.ವಿ.ರಾಮನ್ ಅವರ ಕೊಡುಗೆಯನ್ನು ಗುರುತಿಸಿ, ಈ ಅನ್ವೇ?Àಣೆಗೆ ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. ರಾಮನ್ ಪರಿಣಾಮ ಹೇಗೆ ಬೆಳಕು ಯಾವುದಾದರೂ ವಸ್ತುವಿನೊಡನೆ ಪ್ರತಿಕ್ರಿಯಿಸಿದಾಗ ಚದುರುತ್ತದೆ ಎಂಬುದನ್ನು ವಿವರಿಸುತ್ತದೆ. ಸರ್ ಸಿವಿ ರಾಮನ್ ಅವರು ೧೯೨೮ ರಲ್ಲಿ ರಾಮನ್ ಪರಿಣಾಮ ಪ್ರಸ್ತುತ ಪಡಿಸಿದ ಸವಿ ನೆನಪಿಗಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸುತ್ತಾರೆ.ಎಂದು ಹೇಳಿದರು.


ಶಾಲೆಯ ಸಹ ಶಿಕ್ಷಕ ಎಚ್.ಎಂ.ತಾಳಿಕೋಟಿ ಇವರು ಮಾತನಾಡಿ ಮಕ್ಕಳು ವಿಜ್ಞಾನದ ಉಪಯೋಗಗಳನ್ನು ತಿಳಿದುಕೊಳ್ಳಬೇಕು ಹಾಗೂ ವಿಜ್ಞಾನವು ವ್ಯವಸ್ಥಿತವಾಗಿರುವ ಒಂದು ಅಧ್ಯಯನದ ಸ್ವರೂಪವಾಗಿದೆ ಹಿಂದಿನ ಕಾಲದಲ್ಲಿ ಅನುಸರಿಸುತ್ತಾ ಬಂದ ಸಂಪ್ರದಾಯಗಳೇ ಇಂದು ಮೂಢನಂಬಿಕೆಗಳಾಗಿವೆ . ಅಂತಹುಗಳನ್ನು ತೊಲಗಿಸಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಚಾರವನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜವನ್ನು ನಿರ್ಮಿಸಬಹುದು ಎಂದು ತಿಳಿಸಿದರು.


ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ದಿನಾಚರಣೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಮುಖ್ಯ ಶಿಕ್ಷಕ ಎ.ಎಂ ಗೌಡರ ಸ್ವಾಗತಿಸಿದರು. ಸಹಶಿಕ್ಷಕ ಅರವಿಂದ್ ಅಣ್ಣಿಗೇರಿ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಎಲ್ಲ ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು ವಿದ್ಯಾರ್ಥಿಗಳು ವಿವಿಧ ಪ್ರಾಯೋಗಿಕ ಮಾದರಿಗಳನ್ನು ಪ್ರದರ್ಶನ ಮಾಡಿದರು.