ರಾಷ್ಟ್ರೀಯ ಹಾಕಿ ಸ್ಪರ್ಧೆಗೆ ಹರ್ಷವರ್ಧನ್ ಆಯ್ಕೆಗೆ ಶಾಲೆಯಿಂದ ಸನ್ಮಾನ

ಆಳಂದ:ಡಿ.6: ತಾಲೂಕಿನ ಕಿಣ್ಣಿಸುಲ್ತಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಹರ್ಷವರ್ಧನ್ ಕಲ್ಯಾಣಿ ಶ್ರೀಂಗೇರಿ ಅವರು ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಭಾವಪೂರ್ಣವಾಗಿ ಗೌರವಿಸಲಾಯಿತು.
ಶಾಲೆಯ ಮುಖ್ಯಗುರು ರೇವಣ ಸಿದ್ದಪ್ಪ ಕೋರೆ, ಸಹಶಿಕ್ಷಕರು ಲಕ್ಷ್ಮಣ ತಳಕೇರಿ, ಈರಣ್ಣ ಶಾಪೂರೆ, ಸಿದ್ದಮ್ಮ, ಸಿದ್ಧಾರೂಢ, ಯಲ್ಲಾಲಿಂಗ, ಶೇರಿನಾ ಬೇಗಮ್, ಸರೋಜಿನಿ, ಜಯಶ್ರೀ ಸೇರಿದಂತೆ ಅನೇಕ ಶಿಕ್ಷಕರು ಹಾಜರಿದ್ದು ಸಾಧಕ ಹರ್ಷವರ್ಧನಗೆ ಸನ್ಮಾನಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪಾಲಕರಾದ ಕಲ್ಯಾಣಿ ಶ್ರೀಂಗೇರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಹರ್ಷವರ್ಧನ್ ಅವರ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದರು. ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಅವರು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸಿದರು.