
ನವಲಗುAದ,ಜೂ೨: ಪ್ರಸ್ತಕ ಶೈಕ್ಷಣಿಕ ವರ್ಷದ ಅಂಗವಾಗಿ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-೩ ರಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಅತ್ಯಂತ ಸಂಭ್ರಮದಿAದ ಆಚರಿಸಲಾಯಿತು.
ದೀರ್ಘಾವಧಿಯ ಬೇಸಿಗೆ ರಜೆಯ ನಂತರ ಶಾಲೆಗೆ ಮರಳಿದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯ ದ್ವಾರದಲ್ಲಿ ತಳಿರು-ತೋರಣಗಳಿಂದ ಮತ್ತು ಬಣ್ಣ ಬಣ್ಣದ ಬಲೂನ್‌ಗಳಿಂದ ಶೃಂಗರಿಸಿ ಅದ್ದೂರಿಯಾಗಿ ಸ್ವಾಗತಿಸಲಾಯಿತು, ಶಾಲೆಗೆ ಆಗಮಿಸಿದ ಪುಟ್ಟ ಕಂದಮ್ಮಗಳಿಗೆ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಪ್ರೀತಿಯಿಂದ ಗುಲಾಬಿ ಹೂವುಗಳನ್ನು ನೀಡಿ ಸ್ವಾಗತಿಸಿದರು.
ಹೊಸ ಶೈಕ್ಷಣಿಕ ವರ್ಷದ ಅಂಗವಾಗಿ ಎಲ್.ಕೆ.ಜಿ, ಯು.ಕೆ.ಜಿ ಹಾಗೂ ೧ ರಿಂದ ೭ನೇ ತರಗತಿವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳ ಉಚಿತ ದಾಖಲಾತಿ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು, ಮೊದಲ ದಿನವೇ ವಿದ್ಯಾರ್ಥಿಗಳಿಗೆ ಸರ್ಕಾರದ ನಿಯಮಾವಳಿಗಳನ್ವಯ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು.
ಮುಖ್ಯಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪ್ರಾಥಮಿಕ ಶಿಕ್ಷಣ ಸಂಯೋಜಕರಾದ ಎಸ್.ಎಂ ಬೆಂಚಿಕೇರಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಕಾಶೀಮಸಾಬ ಮಚಲಿಬಂದರ, ಪ್ರಧಾನಗುರುಮಾತೆ ಎಂ.ಸಿ ಚನ್ನಪ್ಪಗೌಡ್ರ, ಮಾಬುಸಾಬ ಯರಗುಪ್ಪಿ, ಬಶೀರಅಹ್ಮದ ಹುನಗುಂದ, ಅಡಿವೆಪ್ಪ ಶಿರಸಂಗಿ, ಮಲ್ಲಿಕಾರ್ಜುನಸ್ವಾಮಿ ಮಠಪತಿ, ಬಸವರಾಜ ಮಲ್ಲದಾಸರ, ಸಹ ಶಿಕ್ಷಕರಾದ ಎಂ.ಎಚ್ ಚಿಕನಾಳ, ಆರ್.ಬಿ ಹಳ್ಳಿಕೇರಿ, ಸುರೇಶ ಭಜಂತ್ರಿ, ಕೆ. ಎಫ್ ಬಂತಿ, ಕುಮಾರಿ ಎಂ.ಎನ್ ವಗ್ಗರ, ಮಂಜುನಾಥ ತೇಲಿ, ಬಸವರಾಜ ಮಡಿವಾಳರ, ಶಿವಾನಂದ ಜಾಲಗಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…


























