
ಚಿಂಚೋಳಿ:ಫೆ.19: ತಾಲೂಕಿನ ಚುಮ್ಮನಚೋಡ್ ಗ್ರಾಮದ ಡಾ. ಅಬ್ದುಲ ಕಲಾಂ ಆಂಗ್ಲ ಮಾಧ್ಯಮ ಶಾಲೆಯ 12ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಹಮ್ಮಿಕೊಂಡಿದ್ದರು ಕಾರ್ಯಕ್ರಮವನ್ನು ಜ್ಯೋತಿ ಬಳಸುವ ಮೂಲಕ ಚಿಂಚೋಳಿಯ ಪುರಸಭೆ ಮಾಜಿ ಅಧ್ಯಕ್ಷರಾದ ಅಬ್ದುಲ್ ಬಾಸೀದ್, ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ ಕಲಾಂ ದೇಶ ಕಂಡ ಮಹಾನ ವಿಜ್ಞಾನಿಯಾಗಿದ್ದರು ಇವರ ಹೆಸರಿನಲ್ಲಿ ಇಟ್ಟಂತಹ ಶಿಕ್ಷಣ ಸಂಸ್ಥೆಗಳು ಇವರಂತೆ ಮಹಾನ್ ಸಾಧನೆ ಮಾಡಿ, ದೇಶದಲ್ಲಿನ ಬಡ ಮಕ್ಕಳಿಗೆ ಮತ್ತು ಅವರ ಭವಿಷ್ಯಕ್ಕೆ ದಾರಿದೀಪವಾಗಿ ಕಾರ್ಯನಿರ್ವಹಿಸಿ
ಮಕ್ಕಳಿಗೆ ಉತ್ತಮ ಜೀವನ ಪಡೆದುಕೊಳ್ಳಲು ಸಾಕಾರವಾಗಲಿದೆ
ಈ ದಿನಮಾನಗಳಲ್ಲಿ ಒಂದು ಶಾಲೆ ನಡೆಸಬೇಕೆಂದರೆ ಬಹಳಷ್ಟು ಕಷ್ಟವಾಗುತ್ತದೆ ಆದರೆ ನವಾಜ್ ಪಟೇಲ್ ಮಾಲಿಪಟೇಲ್, ಅವರ ಕುಟುಂಬಕ್ಕೆ ಎಷ್ಟು ಧನ್ಯವಾದಗಳು ಹೇಳಿದರು ಸಾಕಾಗೋದಿಲ್ಲ ಏಕೆಂದರೆ ಚಿಂಚೋಳಿ ತಾಲೂಕಿನಲ್ಲಿ ಪೆÇೀಲಕಪಳ್ಳಿ, ಮತ್ತು ಸುಲೇಪೇಟ, ಹಾಗೂ ಕೊಡ್ಲಿ, ಮತ್ತು
ಚುಮ್ಮನಚೋಡ್ ಗ್ರಾಮದಲ್ಲಿ
ಡಾ. ಅಬ್ದುಲ ಕಲಾಂ ಆಂಗ್ಲ ಮಾಧ್ಯಮ ಶಾಲೆಗಳು
ನಾಕು ಕಡೆ ಶಾಲೆಗಳನ್ನು ತೆಗೆದು ಉತ್ತಮ ರೀತಿಯಲ್ಲಿ ಶಾಲೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಅವರ ಡಾ. ಅಬ್ದುಲ ಕಲಾಂ ಆಂಗ್ಲ ಮಾಧ್ಯಮ ಶಾಲೆ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ಉತ್ತಮವಾಗಿ ಬೆಳೆ ಬೇಕೆಂದು ಮತ್ತು ವಿದ್ಯಾರ್ಥಿಗಳು ಗುರುಗಳ
ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡಿ ತಮ್ಮ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು ಗುರು ಶಕ್ತಿಗಿಂತ ಮತ್ತೊಂದು ಬೇರೆ ಶಕ್ತಿ ಇಲ್ಲ ಎಂದು ಹೇಳಿದರು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಲಕ್ಷ್ಮಣ್ ಆವಂಟಿ, ಅವರು ಮಾತನಾಡಿ ಇಂದಿನ ಮಕ್ಕಳು ಉತ್ತಮ ಅಭ್ಯಾಸ ಮಾಡಬೇಕಾದರೆ ಅಂತ ಸಂಸ್ಥೆಯ ಶಾಲೆಗಳು ನಮಗೆಲ್ಲಾ ಅಗತ್ಯವಾಗಿದೆ ಪೆÇೀಷಕರು ಕೂಡ ಮಕ್ಕಳು ಓದಿದ್ದಾರೆ ಅಂದರೆ, ತಾವುಗಳು ಮಕ್ಕಳು ಯಾ ರೀತಿ ಓದುತ್ತಾರೆ ಎಂದು ಗಮನ ಹರಿಸಿ ಮಕ್ಕಳು ಶಾಲೆಗೆ ಹೋಗಿ ಬಂದ ನಂತರ ಮನೆಯಲ್ಲಿ ಒಂದು ಗಂಟೆಯಾದರೂ ಕೂಡ ಮಕ್ಕಳ ಹೋಂ ವರ್ಕ್ ಬಗ್ಗೆ ಮತ್ತು ಅವರ ಅಭ್ಯಾಸ ಬಗ್ಗೆ ಗಮನ ಹರಿಸಬೇಕು ಏಕೆಂದರೆ ಶಾಲೆಗೆ ಹೋಗಿ ಬಂದರೆ ಅಲ್ಲ ಶಾಲೆಯಲ್ಲಿ ವಿದ್ಯಾಭ್ಯಾಸ ಯಾ ರೀತಿ ಆಗುತ್ತಿದೆ ಮತ್ತು ನಮ್ಮ ಮಕ್ಕಳು ಯಾವ ರೀತಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ನಾವು ಗಮನ ಹರಿಸಬೇಕು ಮತ್ತು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಒಳ್ಳೆ ಸಂಸ್ಕøತಿಯನ್ನು ಕಲಿಸಬೇಕು ಎಂದು ಹೇಳಿದರು ಕಾರ್ಯಕ್ರಮದಲ್ಲಿ ಡಾ. ಅಬ್ದುಲ ಕಲಾಂ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷರಾದ ನವಾಜ್ ಪಟೇಲ್ ಮಾಲಿಪಟೇಲ್, ಸಂಸ್ಥೆಯ ನಿರ್ದೇಶಕರಾದ ಮಹೆಬೂಬ ಮಾಲಿಪಟೇಲ್, ಆರೀಫ್ ಮಾಲಿಪಟೇಲ್, ಶುಕುರ ಮಾಲಿಪಟೇಲ್, ಮುಖಂಡರಾದ ಮೊಹಮ್ಮದ್ ಪಠಾಣ್, ಬಾಬುರಾವ್ ಚವ್ಹಾಣ, ಹೈದರ್ ಅಲಿ ಮೀರಾನ್, ಸಂಜೀವಕುಮಾರ ಪಾಟೀಲ್, ಝಮೀರ್, ರಾಮರೆಡ್ಡಿ ಪಾಟೀಲ್, ಶಂಕರರಾವ, ಎಂಡಿ ಇಶಾಕ, ಶರಣರೆಡ್ಡಿ, ಜಾವಿದ್ ಪಟೇಲ್, ಸಿರಾಜುದ್ದೀನ್, ಕಾಶಿನಾಥ್ ಸಿಂಧೆ, ಪಂಡಿತ್ ಕಟ್ಟಿಮನಿ, ರವಿಕುಮಾರ್, ಮಲ್ಲಿಕಾರ್ಜುನ್ ಕೋಡಂಬಲ್, ಅಮೀರ್ ಅಲಿ, ಲಕ್ಷ್ಮಿ ಪಾಟೀಲ್, ಸೇರಿದಂತೆ ಅನೇಕ ಶಾಲೆಯ ಶಿಕ್ಷಕರ ಸಿಬ್ಬಂದಿ ಮತ್ತು ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು



























