Home ಜಿಲ್ಲೆ ಕಲಬುರಗಿ ಬ್ಯಾಂಕ್ ನೌಕರರ ಬೇಡಿಕೆ ಈಡೇರಿಕೆಗೆ ಮೇ 25-26ರಂದು ಮುಷ್ಕರ: ಎಸ್‍ಬಿಎಸ್‍ಯು(ಕೆ) ಮೌನ ಪ್ರತಿಭಟನೆ

ಬ್ಯಾಂಕ್ ನೌಕರರ ಬೇಡಿಕೆ ಈಡೇರಿಕೆಗೆ ಮೇ 25-26ರಂದು ಮುಷ್ಕರ: ಎಸ್‍ಬಿಎಸ್‍ಯು(ಕೆ) ಮೌನ ಪ್ರತಿಭಟನೆ

ಕಲಬುರಗಿ :ಮೇ.9: ಬ್ಯಾಂಕಿನ ನೌಕರರ ಹಲವು ದೀರ್ಘಕಾಲದ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್ (ಂISಃISಈ) ಮೇ 25 ಮತ್ತು 26ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಸ್ಟಾಫ್ ಯೂನಿಯನ್ (ಕರ್ನಾಟಕ) ವತಿಯಿಂದ ನಗರದ ಜಗತ್ ವೃತದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.
ಸಂಘದ ಪ್ರಮುಖ ಬೇಡಿಕೆಗಳಲ್ಲಿ ಮೆಸೆಂಜರ್‍ಗಳು ಹಾಗೂ ಶಸ್ತ್ರಸಜ್ಜಿತ ರಕ್ಷಕರ ತಕ್ಷಣದ ನೇಮಕಾತಿ, 2019ರಿಂದ ಸೇವೆಗೆ ಸೇರಿದ ನೌಕರರಿಗೆ Iಅಖಿ ವರ್ಗಾವಣೆ ಜಾರಿ, ಶಾಶ್ವತ ಹುದ್ದೆಗಳ ಔಟ್‍ಸೋಸಿರ್ಂಗ್ ನಿಲ್ಲಿಸುವುದು, ವೇತನ ಸಮಾನತೆ ಸಮಸ್ಯೆ ಪರಿಹಾರ, ಓPS ವ್ಯಾಪ್ತಿಯ ನೌಕರರಿಗೆ ಪಿಂಚಣಿ ನಿಧಿ ನಿರ್ವಹಣೆಯಲ್ಲಿ ಆಯ್ಕೆಯ ಅವಕಾಶ, ಸಮರ್ಪಕ ಸಿಬ್ಬಂದಿ ನೇಮಕಾತಿ ಹಾಗೂ ವೈದ್ಯಕೀಯ ಮರುಪಾವತಿ ಯೋಜನೆಯಲ್ಲಿ ಸುಧಾರಣೆ ಸೇರಿವೆ.
ನಿರ್ವಹಣೆಯ ನಿರ್ಲಕ್ಷ್ಯ ಹಾಗೂ ಬೇಡಿಕೆಗಳಿಗೆ ಸಮರ್ಪಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಮುಷ್ಕರ ಅನಿವಾರ್ಯವಾಗಿದೆ ಎಂದು ಸಂಘದ ಉಪ ಪ್ರಧಾನ ಕಾರ್ಯದರ್ಶಿ ನವೀನ್ ಕಾಗಲ್ಕರ್ ತಿಳಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಗೋಪಾಲಕೃಷ್ಣ ಜೋಶಿ, ಸೋಮಶೇಖರ್ ಕೆ, ರಾಘವೇಂದ್ರ ಕುಲಕರ್ಣಿ, ರೀತಾ ರಾಥೋಡ್ ಸೇರಿದಂತೆ ಇತರರು ಇದ್ದರು.