
ಔರಾದ್ :ಜ.4: ಮಹಿಳಾ ಸಬಲಿಕರಣ ಮತ್ತು ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ ಅಕ್ಷರದ ಅವ್ವರೆಂದೆ ಖ್ಯಾತಿಪಡೆದ ಸಾವಿತ್ರಿಬಾಯಿ ಪೂಲೆ ಅವರ ಆದರ್ಶಗಳನ್ನು ಎಲ್ಲರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಗುರು ಶ್ರೀದೇವಿ ಹೂಗಾರ ಹೇಳಿದರು.
ಶನಿವಾರ ತಾಲೂಕಿನ ನಾಗುರ(ಎಂ) ಸರಕಾರಿ ಪ್ರಾಥಮಿಕ ಶಾಲೆ ಹಾಗು ಸಂತಪುರ ಪೆÇಲೀಸ್ ಠಾಣೆಯ ಅಕ್ಕಪಡೆ ವತಿಯಿಂದ ಅಕ್ಷರದವ್ವ ಸಾವಿತ್ರಿಬಾಯಿ ಫೂಲೆ ಅವರ ಜನ್ಮದಿನ ಮತ್ತು ಮಹಿಳಾ ಸುರಕ್ಷತೆ ಬಗ್ಗೆ ಜರುಗಿದ ಜಾಗೃತಿ ಕಾರ್ಯಕ್ರಮನುದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪಿಸಲು ಫೂಲೆ ಅವರು ಮಾಡಿದ ಸೇವೆ ಅನನ್ಯವಾಗಿದೆ. ಅವರ ಆದರ್ಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿವೆ ಎಂದರು.
ಸಂತಪುರ ಪೆÇಲೀಸ್ ಠಾಣೆಯ ಅಕ್ಕಪಡೆಯ ಅನಿತಾ ಜೂಕಾಲೆ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಅಕ್ಕಪಡೆ ನಿಮ್ಮ ಸೇವೆಗಾಗಿ ಸದಾ ಸಿದ್ದವಿದೆ. ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಉಚಿತ ಸಹಾಯವಾಣ 112 ಮತ್ತು ಮಕ್ಕಳ ಸಹಾಯವಾಣ 1098ಗೆ ಕರೆ ಮಾಡಿದರೇ ಅಕ್ಕಪಡೆ ಸಂಕಷ್ಟದಲ್ಲಿರುವವರ ಸಹಾಯಕ್ಕೆ ಬರಲಿದೆ ಎಂದರು. ಮಕ್ಕಳಿಗೆ ಗೂಡ್ ಟಚ್ ಮತ್ತು ಬ್ಯಾಡ್ ಟಚ್, ಬಾಲ್ಯವಿವಾಹ, ಪೆÇೀಸ್ಕೋ ಕಾಯಿದೆ, ಮಹಿಳಾ ಸುರಕ್ಷತೆ, ಬಗ್ಗೆ ಮಾಹಿತಿ ನೀಡಿದರು.
ಅಕ್ಕಪಡೆಯಿಂದ ಜೋಜನಾ, ನಾಗುರ(ಎನ್) ಸೇರಿದಂತೆ ಇನ್ನಿತರ ಶಾಲೆಗಲಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು.
ಈ ಸಂಧರ್ಭದಲ್ಲಿ ಸಂತಪುರ ದೀಪಾಲಯ ಸಮಾಜ ಸೇವಾ ಸಂಸ್ಥೆ ನಿರ್ದೇಶಕಿ ಸಿಸ್ಟರ್ ಲಿನೇಟ್, ಅಕ್ಕ ಪಡೆಯ ಮೀನಾಕ್ಷಿ ನಾಗುರ್ಕರ್, ನಾಗೇಶ ಪಟ್ನೆ, ಅಂಗನವಾಡಿ ಕಾರ್ಯಕರ್ತೆ ಶ್ರೀದೇವಿ ಗೌಡಾ, ಸುರೇಖಾ, ಜ್ಯೋತಿuಟಿಜeಜಿiಟಿeಜ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




























