ಆಲಮೇಲ:ಅ.೪: ಪಟ್ಟಣದ ಹಜರತ್ ಪೀರ್ ಗಾಲಿ ಸಾಬ್ ದರ್ಗಾಕೆ ಹೋಗುವ ರಸ್ತೆಸಲುವಾಗಿ ಸತತವಾಗಿ ೧೨ನೇ ದಿನ ಸತ್ಯಾಗ್ರಹ ಸಿಂದಗಿ ಶಾಸಕ ಅಶೋಕ ಮನಗೂಳಿ ಅವರಿಂದ ಅಂತ್ಯ ಹಾಡಿದರು.
ಪಟ್ಟಣದ ಗ್ರಾಮ ದೇವರಾದ ಗಾಲೀಬ ಸಾಬ್ ದರ್ಗಾಕ್ಕೆ ರಸ್ತೆ ಸುಮಾರು ೪೩ ಹಳ್ಳಿಗೆ ಹಾಗೂ ಮುಖ್ಯವಾಗಿ ಪಟ್ಟಣದ
ಊರಿನ ಜನತೆಗೆ ಪ್ರಮುಖವಾದ ರಸ್ತೆ ವಾಗಿದೆ. ಆದರಿಂದ ಸಿಂದಗಿ ಶಾಸಕರಾದ ಅಶೋಕ ಮನಗೂಳಿ ಮಾತನಾಡಿ ಗ್ರಾಮ ದೇವರಾದ ಗಾಲಿ ಸಾಬ್ ದರ್ಗಾಕೆ ರಸ್ತೆಯ ಎಲ್ಲರಿಗೂ ಅವಶ್ಯವಿದ್ದು ಎಂಟು ಹತ್ತು( ೮-೧೦)ದಿನಗಳಲ್ಲಿ ೨೦ ಪುಟು ರಸ್ತೆ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಸತ್ಯಾಗ್ರಹ ಮಾಡಿದ ಹೊರಟಗರಿಗೆ ತಿಳಿಸಿದರು.
ಇದೇ ವೇಳೆ ಆಲಮೇಲ ತಾಲೂಕು ದಂಡಾಧಿಕಾರಿಗಳಾದ.ಕೆ.ವಿಜಯಕುಮಾರ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ ಸುಂಬುಡ ಮಾತನಾಡಿದರು.ಹರೀಶ ಯಂಟಮನ.ಪ್ರಭು ವಾಲಿಕರ್ ಕೂಡ ಮಾತನಾಡಿ. ಊರಿನ ಹಿತಕ್ಕಾಗಿ ಜಾತ್ರೆ ವೇಳೆ ಆಗುವ ಸಮಸ್ಯೆಕಾಗಿ ಈ ರಸ್ತೆ ಅವಶ್ಯಕತೆ ಇದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ
ನಾಗರಿಕ ವೇದಿಕೆ ಅಧ್ಯಕ್ಷ ರಮೇಶ ಬಂಟನೂರ. ಆಲಮೇಲ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಅಶೋಕ್ ಕೋಳರಿ.ಆಯುಬ್ ದೇವರಮನಿ.ಡಾಕ್ಟರ್ ಸಂಜು ಯಂಟಮನ.ಎಪಿಎAಸಿ ಅಧ್ಯಕ್ಷರಾದ ಬಸವರಾಜ ಬಾಗೇವಾಡಿ.ಶಿವುಕುಮಾರ ಮೇಲಿನಮನಿ ರಾಜು ಮೇತ್ರಿ ಶಶಿಧರ್ ನಾಯ್ಕೋಡಿ. ಊರಿನ ಹಿರಿಯರು ರಾಜಕೀಯ ಮುಖಂಡರು ಜಾತಿ ಭೇದ ಅನ್ನದೆ ಯಾವ ಪಕ್ಷಕ್ಕೆ ಸೀಮಿತವಾಗದೆ ಅನೇಕ ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





















