28ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದ ಸೇಡಂನ ಸಾತ್ವಿಕ್ ದೀಪಕ್

ಸೇಡಂ, ನ, 08: ಮೈಸೂರಿನ ಚಾಮುಂಡಿ ವಿಹಾರ್ ಇಂಡೋರ ಸ್ಟೇಡಿಯಂನಲ್ಲಿ ಹೆವೆನ್ ಫೈಟರ್ ಸಂಸ್ಥೆಯ ನಿರ್ದೇಶಕರು, ಹಾಗೂ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಪಟು ಮನೋಹರ ಕುಮಾರ್ ಬೀರನೂರ ರವರ ನೇತೃತ್ವದಲ್ಲಿ ಸೇಡಂ ತಾಲೂಕಿನ ಸಾತ್ವಿಕ್ ತಂದೆ ದೀಪಕ್ ಎಮ್ ಜಿ, ವಾಸವದತ್ತ ವಿದ್ಯಾ ವಿಹಾರ ಸೇಡಂ ಶಾಲೆಯ ವಿದ್ಯಾರ್ಥಿ 28ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆಯುವುದರ ಮೂಲಕ ರಾಜ್ಯಕ್ಕೆ, ಕಲ್ಯಾಣ ಕರ್ನಾಟಕ, ಜಿಲ್ಲೆಗೆ ಹಾಗೂ ಸೇಡಂ ತಾಲೂಕಿಗೆ ಕೀರ್ತಿ ತಂದು ಕೊಟ್ಟಿದ್ದಾನೆ. ಈ ಸಾಧನೆಗೆ ವೈದ್ಯಕೀಯ ಶಿಕ್ಷಣ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್, ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷರು ಮಾಜಿ ಎಂಎಲ್‍ಸಿ, ಸಿ ಎಸ್ ಅರುಣ್ ಮಾಚಯ್ಯ , ಕಲಬುರ್ಗಿ ಜಿಲ್ಲೆ ಮತ್ತು ಸೇಡಂ ತಾಲೂಕಿನ ರಾಜಕೀಯ ಮುಖಂಡರು,ಕ್ರೀಡಾ ಅಭಿಮಾನಿಗಳು ಮತ್ತು ತರಬೇತುದಾರರಾದ ಅನಿಲ್ ಹಳ್ಳಿಮನಿ, ಸಾಯಿಬ್ಬಣ್ಣ ಅಳೋಳ್ಳಿ, ಅಬ್ದುಲ್, ಮತ್ತು ಸಂಸ್ಥೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.