
ಸಂಜೆ ವಾಣಿ ವಾರ್ತೆ
ಜಮಖಂಡಿ: ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಸೆ. ೨೭ರಂದು ಸಂಜೆ ೬ ಗಂಟೆಗೆ ತಿಂಗಳ ನಾಲ್ಕನೇ ಭಾನುವಾರದ ಮಾಸಿಕ ಕಾರ್ಯಕ್ರಮ ‘ಶ್ರೀಗುರುದೇವ ಸತ್ಸಂಗ’ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಬಾವಲತ್ತಿಯ ಶ್ರೀಪೂರ್ಣಾನಂದ ಮಠದ ವಿಜಯವೇದಾಂಗ ಮಹಾಸ್ವಾಮಿಗಳು ‘ನಿಜವಾದ ಭಕ್ತಿ ಯಾವುದು?’ ಎಂಬ ವಿಷಯ ಕುರಿತು ಅನುಭಾವ ಹಂಚಿಕೊಳ್ಳಲಿದ್ದಾರೆ. ಶ್ರೀಗುರುದೇವ ಸಂಗೀತ ಬಳಗದಿಂದ ಸಂಗೀತ ಸೇವೆ ನಡೆಯಲಿದೆ.
ಇನಾಮಹಂಚಿನಾಳ-ಸಿದ್ದಾಪುರ ಗ್ರಾಮದ ಬಸಪ್ಪ ಹ. ಕಾಗವಾಡ ಅವರು ಮಹಾಪ್ರಸಾದ ಸೇವೆ ನೆರವೇರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


























