
ಕಲಬುರಗಿ:ಫೆ.2:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ಗಿಖಿU), ಬೆಳಗಾವಿಯಲ್ಲಿ ಇಂದು (02-02-2026) ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಸತೀಶ್‍ಕುಮಾರ್ ಡಿ. ಜೋಗದ ಅವರಿಗೆ ಅನ್ವಯ ವಿಜ್ಞಾನ ವಿಭಾಗದ ಭೌತಶಾಸ್ತ್ರ ವಿಷಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (Phಆ) ಪದವಿಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಗಿದೆ.
ಅವರು “ಃಚಿ ಮತ್ತು Sಡಿ-ಫೆರೈಟ್‍ಗಳಿಂದ ಡೋಪ್ ಮಾಡಿದ PಂಓI ಯ ಸಾರಕ ಗುಣಲಕ್ಷಣಗಳ ಅಧ್ಯಯನ” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ, 2025 ಅಕ್ಟೋಬರ್ 24 ರಂದು ನಡೆದ ಅಂತಿಮ ವೈವಾ ವೋಸ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಇದರ ಫಲವಾಗಿ, ಇಂದು ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪಿಎಚ್‍ಡಿ ಪದವಿಯನ್ನು ಅಧಿಕೃತವಾಗಿ ನೀಡಲಾಗಿದೆ.
ಅವರ ಈ ಮಹತ್ವದ ಶೈಕ್ಷಣಿಕ ಸಾಧನೆಗೆ ಕುಟುಂಬದವರು, ಬಂಧು-ಮಿತ್ರರು, ಗುರುಗಳು ಹಾಗೂ ಶೈಕ್ಷಣಿಕ ವಲಯದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
























