Home ಜಿಲ್ಲೆ ಬೆಂಗಳೂರು ದೇವರ ಕಾರ್ಯದಿಂದ ಮನಸ್ಸಿಗೆ ತೃಪ್ತಿ : ಶಾಸಕಿ ರೂಪಶಶಿಧರ್

ದೇವರ ಕಾರ್ಯದಿಂದ ಮನಸ್ಸಿಗೆ ತೃಪ್ತಿ : ಶಾಸಕಿ ರೂಪಶಶಿಧರ್

ಕೆಜಿಎಫ್.ಜೂ.೨೫: ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ರಾಜಗೋಪುರ ದ್ವಾರ ಹಾಗೂ ಮೊದಲನೇ ಸ್ತಂಭಕ್ಕೆ ಶಾಸಕಿ ರೂಪ ಶಶಿಧರ್ ಪೂಜೆ ನೆರವೇರಿಸಿದರು.
ಪೂಜೆ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ರೂಪ ಶಶಿಧರ್, ದೇವರ ಕಾರ್ಯದಿಂದ ಮನಸ್ಸಿಗೆ ತೃಪ್ತಿ ದೊರಕಲಿದೆ.ದೇವತಾ ಕಾರ್ಯದಲ್ಲಿ ಮಾಡುವ ಅವಕಾಶ ನನಗೆ ಕಲ್ಪಿಸಿರುವುದು ನನ್ನ ಅದೃಷ್ಟವೆಂದು ಹೇಳಿದರು .


ಮುಜರಾಯಿ ಇಲಾಖೆಯ ಆಗಮಿಕ ಪಂಡಿತರ ಸೂಚನೆ ಹಾಗೂ ಸಲಹೆಯಂತೆ ಕಾಮಗಾರಿ ನಡೆಯಲಿದ್ದು,ನೂರಾರು ವರ್ಷಗಳ ಕಾಲ ಬಾಳಕೆ ಬರಬೇಕಿರುವುದರಿಂದ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.


ಇದಲ್ಲದೆ, ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಅನುಭವ ಆಗಿದ್ದು ಕರ್ನಾಟಕದ ಶೃಂಗೇರಿ ಹಾಗೂ ಇತರೆ ಪ್ರಸಿದ್ಧ ದೇವಾಲಯಗಳಲ್ಲಿ ಕಾಮಗಾರಿಯನ್ನು ಕೈಗೊಂಡಿರುವ ಅನುಭವ ಹೊಂದಿದ್ದಾರೆ.ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು,ಮುಜರಾಯಿ ಸಚಿವರನ್ನು ಕರೆಸಿ ಲೋಕಾರ್ಪಣೆಯನ್ನು ಮಾಡಲಾಗುವುದು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪದ್ಮನಾಭ ರೆಡ್ಡಿ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಕೆ ಸಿ ರೆಡ್ಡಿ ಚಾರಿಟೇಬಲ್ ಅಧ್ಯಕ್ಷ ರಾಧಾಕೃಷ್ಣಾರೆಡ್ಡಿ, ಸಮಿತಿ ಸದಸ್ಯರಾದ ಮುಕುಂದ, ಮಾಜಿ ನಗರಸಭೆ ಉಪಾಧ್ಯಕ್ಷ ಜಯಂತಿ ಶ್ರೀನಿವಾಸ್ ಹಾಗೂ ಇತರರು ಹಾಜರಿದ್ದರು