
ಶ್ರೀಹರಿಕೋಟಾ,ಮೆ.೧೮- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೊದ ಮಹತ್ವಾಕಾಂಕ್ಷೆಯ ಉಪಗ್ರಹ ಪಿಎಸ್ ಎಲ್ ವಿ -ಸಿ೬೧ ಉಡಾವಣೆ ವಿಫಲವಾಗಿದೆ. ಈ ಮೂಲಕ ವಿಜ್ಞಾನಿಗಳಲ್ಲಿ ನಿರಾಸೆ ಮೂಡಿದೆ.
ಆಂದ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣೆ ಕೇಂದ್ರದಿಂದ ನಭಕ್ಕೆ ಜಿಗಿದ ೧೦೧ನೇ ರಾಕೆಟ್ ಯಶಸ್ವಿ ಕಾರ್ಯಾಚರಣೆ ಮಾಡುವಲ್ಲಿ ವಿಫಲವಾಗಿದೆ. ಈ ಉಪಗ್ರಹ ಬಹು ಕಾರಣದಿಂದ ಮಹತ್ವ ಪಡೆದಿತ್ತು, ಯಶಸ್ವಿಯಾಗಲು ವಿಫಲವಾಗಿರುವುದು ವಿಜ್ಞಾನಿಗಳಲ್ಲಿ ಬಾರಿ ನಿರಾಸೆಗೆ ಕಾರಣವಾಗಿದೆ,
ಪಿಎಸ್‌ಎಲ್ ವಿ ಸಿ-೬೧ ಉಪಗ್ರಹ ಎರಡನೇ ಹಂತದವರೆಗೂ ಸಾಮಾನ್ ಕಾರ್ಯಾಚರಣೆಯಲ್ಲಿದ್ದು ಮೂರನೇ ಹಂತದಲ್ಲಿ ವಿಫಲವಾಗಿದೆ. ಇದು ವಿಜ್ಞಾನಿಗಳು ಮತ್ತು ಉಪಗ್ರಹ ಉಡಾವಣೆಯಲ್ಲಿ ಕೆಲಸಮಾಡಿದ ತಂಡದಲ್ಲಿ ನಿರಾಸೆ ಮೂಡಿಸಿದೆ.
ಇದಕ್ಕೂ ಮುನ್ನ ೧೯೯೩ರ ಸೆಪ್ಟಂಬರ್ ೨೦ ರಂದು ಪಿಎಸ್‌ಎಲ್ ವಿ ಡಿ-೧ ವಿಫಲವಾಗಿತ್ತು. ಆದಾದ ಬಳಿಕ ೨೦೧೭ರ ಆಗಸ್ಟ್ ೩೧ರಂದು ಪಿಎಸ್ ಎಸ್ ವಿ-ಸಿ೩೯ ಮಿಷನ್ ವಿಫಲವಾಗಿತ್ತು, ಇದು ಮೂರನೇ ಪಿಎಸ್‌ಎಲ್‌ವಿ ಯ ವೈಫಲ್ಯವಾಗಿದೆ. ವೈಫಲ್ಯಕ್ಕೆ ಕಾರಣ ಪತ್ತೆ ಮಾಡುವಲ್ಲಿ ಇಸ್ರೋದ ವೈಜ್ಞಾನಿಕ ತಂಡ ನಿರತವಾಗಿದೆ.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ ೫.೫೯ಕ್ಕೆ ಯಶಸ್ವಿ ಉಡಾವಣೆಯಾದರೂ ನಿಗಧಿತ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ಈ ಕಾರ್ಯಾಚರಣೆಯಲ್ಲಿ, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಭೂ ವೀಕ್ಷಣಾ ಉಪಗ್ರಹ – ಪಿಎಸ್ ಎಲ್ ವಿ ಸಿ-೬೧ ನಲ್ಲಿ ಇಎಸ್‌ಓ- ೯ ಬಾಹ್ಯಾಕಾಶಕ್ಕೆ ಕೊಂಡೊಯ್ಯಬೇಕಿತ್ತು. ಪಿಎಸ್‌ಎಸ್‌ವಿಯ ಒಟ್ಟಾರೆ ೬೩ನೇ ಉಡಾವಣೆಯಲ್ಲಿ ಬೆಳಗ್ಗೆ ೫:೫೯ಕ್ಕೆ ಮೊದಲ ಉಡಾವಣಾ ಪ್ಯಾಡ್‌ನಿಂದ ಸಮಯಕ್ಕೆ ಸರಿಯಾಗಿ ನಭದತ್ತ ಹಾರಿತು. ಆದರೂ ಯಶಸ್ವಿಯಾಗಲು ವಿಫಲವಾಗಿದೆ
ದೇಶದ ದೂರಸಂವೇದಿ ಸಾಮಥ್ರ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಿಎಸ್ ಒ-೯ ಉಪಗ್ರಹವನ್ನು ವಿನ್ಯಾಸಗೊಳಿಸಲಾಗಿದೆ. ಸಿಎಸ್‌ಒ-೯ ನಿರ್ದಿಷ್ಟವಾಗಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು, ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಚಟುವಟಿಕೆಗಳ ಪತ್ತೆಗಾಗಿ ವಿನ್ಯಾಸಗೊಳಿಸಲಾಗಿದೆ. ಸದ್ಯ ಉಡಾವಣೆ ಸಮಯದಲ್ಲಿ ಯಾವ ಹಂತದಲ್ಲಿ ಸಮಸ್ಯೆ ಸಂಭವಿಸಿದೆ ಮತ್ತು ಅದನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಕಂಡುಕೊಳ್ಳಲು ಇಸ್ರೋ ತಾಂತ್ರಿಕ ತಂಡ ಪರಿಶೀಲನೆಯಲ್ಲಿ ತೊಡಗಿದೆ.
ಉಪಗ್ರಹ ಉಡಾವಣೆಯ ಮೊದಲ ಮತ್ತು ಎರಡನೇ ಹಂತ ಯಶಸ್ವಿಯಾಗಿ ನಡೆಯಿತು. ಆದರೆ ಮೂರನೇ ಹಂತವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ತಾಂತ್ರಿಕ ದೋಷದಿಂದಾಗಿ ಕಾರ್ಯಾಚರಣೆ ಯಶಸ್ವಿಯಾಗಲಿಲ್ಲ ತಿಳಿಸಲಾಗಿದೆ. ಆದರೆ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಈ ಬಗ್ಗೆ ಪರಿಶೀಲಿಸಿ, ಮಾಧ್ಯಮಗಳಿಗೆ ವಿವರವಾದ ಮಾಹಿತಿ ನೀಡುತ್ತೇವೆ ಎಂದು ಇಸ್ರೋ ತಿಳಿಸಿದೆ
ಡೇಟಾ ವಿಶ್ಲೇಷಿಸಿ ಮಾಹಿತಿ: ಇಸ್ರೋ
ಮೂರನೇ ಹಂತದ ಕಾರ್ಯಾಚರಣೆ ವೇಳೆ ಒಂದು ಅಡಚಣೆ ಎದುರಾಯಿತು. ಹೀಗಾಗಿ, ನಮಗೆ ಈ ಮಿಷನ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈಗ ನಾವು ಡೇಟಾವನ್ನು ವಿಶ್ಲೇಷಿಸಿದ ಬಳಿಕ ಮರಳಿ ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಇಸ್ರೋ ಅಧ್ಯಕ್ಷ ವಿ, ನಾರಾಯಣನ್ ಹೇಳಿದ್ದಾರೆ.
ಉಡಾವಣೆಯ ಸಮಯದಲ್ಲಿ ಎಲ್ಲಿ ಸಮಸ್ಯೆ ಸಂಭವಿಸಿದೆ ಮತ್ತು ಭವಿಷ್ಯದಲ್ಲಿ ಅದನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಕಂಡುಹಿಡಿಯಲು ಇಸ್ರೋ ತಾಂತ್ರಿಕ ತಂಡವು ಈಗ ಸಮಸ್ಯೆಯನ್ನು ವಿವರವಾಗಿ ಪರಿಶೀಲಿಸುತ್ತದೆ. ಆ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಸಿಗಲು ಸಾಧ್ಯ ಎಂದು ಅವರು ತಿಳಿಸಿದ್ಧಾರೆ
ಈ ಮಿಷನ್ ಅಡಿಯಲ್ಲಿ ಭೂಮಿ ವೀಕ್ಷಣಾ ಉಪಗ್ರಹ-೦೯ ಅನ್ನು ಭೂಮಿಯ ಸೂರ್ಯ ಸಿಂಕ್ರೊನಸ್ ಕಕ್ಷೆಯಲ್ಲಿ ಇರಿಸಬೇಕಾಗಿತ್ತು. ಈ ಉಪಗ್ರಹ ಪುನರಾವರ್ತಿತ ಆವೃತ್ತಿಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿನ ಬಳಕೆದಾರ ಸಮುದಾಯಕ್ಕೆ ನಿಖರ ಮತ್ತು ನಿಯಮಿತ ದೂರಸಂವೇದಿ ಡೇಟಾವನ್ನು ಒದಗಿಸುವ ಉದ್ದೇಶ ಹೊಂದಲಾಗಿತ್ತು ಎಂದಿದ್ಧಾರೆ