
ಚನ್ನಮ್ಮನ ಕಿತ್ತೂರು,ಜ16: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇ?Àವಾಗಿ ಸಮೀಪದ ಖಾನಾಪುರ ತಾಲ್ಲೂಕಿನ ಕಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಹಕ್ಕಿ ಪಕ್ಕಿ ಸಮುದಾಯ ಹಾಗೂ ಞಚಿಣಚಿಞಚಿಡಿi ಸಮುದಾಯಗಳ ಸ್ಥಳಕ್ಕೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಹಾಗೂ ಅವರ ಸಮುದಾಯಗಳ ಆಚಾರ ವಿಚಾರ ಮತ್ತು ಮಕ್ಕಳ ಆರೋಗ್ಯವನ್ನು ವಿಚಾರಿಸಿದ ದಲಿತ ಮುಖಂಡ ಮಲ್ಲೇಶ್ ಚೌಗಲಾ ಹಾಗೂ ಕೆ.ಆರ್.ಡಿ.ಎಸ್.ಎಸ್. ಸಂಯೋಜಕ ಸಂಘಟನೆ ಕಾರ್ಯಕರ್ತರು. ಸರ್ಕಾರದ ಸಹಾಯ ಸೌಲತ್ತುಗಳನ್ನು ಕೊಡಿಸಲು ನಿಮ್ಮ ಜೊತೆ ನಾವು ಇದ್ದೇವೆ. ನಿಮ್ಮ ನಿರಂತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಈ ವೇಳೆ ರಾಜಶೇಖರ ಹಿಂಡಲಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳಗಾವಿ, ರಾಘವೇಂದ್ರ ಚಲವಾದಿ ತಾಲೂಕು ಅಧ್ಯಕ್ಷ ಖಾನಾಪುರ, ದಯಾನಂದ ಹಕ್ಕಿ ಪಕ್ಕಿ, ಮಾರುತಿ ಕಾಂಬಳೆ, ಬಸವರಾಜ ಮಾದರ, ರವಿ ಮಾದರ, ಸಂದೀಪ ಕೋಲಕರ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.























