ಕಾಳಗಿಯಲ್ಲಿ ಸಂಜೆವಾಣಿ ಕ್ಯಾಲೆಂಡರ್ ಬಿಡುಗಡೆ

ಕಾಳಗಿ : ಜ.2:ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ-ತೀಡಿ ಸರಿದೂಗಿಸುವ ಕೆಲಸಗಳನ್ನು ಮಾಡುವಲ್ಲಿ ಮಾಧ್ಯಮಗಳ ಪಾತ್ರ ತುಂಬಾ ಪ್ರಮುಖವಾಗಿದೆ.
ಅದರಲ್ಲಿ ಸುದೀರ್ಘ ಕಾಲದಿಂದಲೂ ಕಾರ್ಯ ನಿರ್ವಹಿಸುತ್ತಾ ಬಂದಿರುವ ಸಂಜೆ ವಾಣಿ ಕನ್ನಡ ದಿನ ಪತ್ರಿಕೆ ಸತ್ಯದ ಸಂಕೇತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಾಮಾಜಿಕ ಕಳಕಳಿಯನ್ನು ತೊರ್ಪಡುತ್ತದೆ ಎಂದು ಕಾಳಗಿ ಗ್ರೇಡ್-1 ತಹಶಿಲ್ದಾರ ಪೃಥ್ವಿರಾಜ ಪಾಟೀಲ ತಮ್ಮ ಅನಿಸಿಕೆ ಯನ್ನು ವ್ಯಕ್ತಪಡಿಸಿದ್ದಾರೆ.

ಕಾಳಗಿಯಲ್ಲಿ ಗುರುವಾರ ಸಂಜೆ ವಾಣಿ ಹೊರತಂದ ಕ್ಯಾಲಿಂಡರ್ ಬಿಡುಗಡೆಗೊಳಿಸಿ, ಮಾತನಾಡಿದರು.

ಪ.ಪಂ ಮುಖ್ಯಾಧಿಕಾರಿ ಪಂಕಜಾ ಎ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಜ್ವಲಂತ ಸಮಸ್ಯೆಗಳು, ನಾಡಿನ ಕಲೆ, ಸಾಂಸ್ಕøತಿ, ಸಾಹಿತ್ಯ, ಸಂಗೀತ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುವಂತಹ ನಿಟ್ಟಿನಲ್ಲಿ ಸಂಜೆವಾಣಿ ಕ್ಯಾಲಿಂಡರ್ ವಿಶೇಷ ಹೊರತಂದಿರುವುದು ತುಂಬಾ ಸಂತೋಷ ತಂದಿದೆ ಎಂದರು.
ಪತ್ರಿಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟಗೊಳ್ಳುವ ಮೂಲಕ ಎತ್ತರ ಕ್ಕೇರಲಿ ಎಂದು ಹಾರೈಸಿ ಶುಭಕೋರಿದರು.

ಪಂಚ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಪಟ್ಟಣ ಪಂಚಾಯತ ಸದಸ್ಯ ರಮೇಶ ಕಿಟ್ಟದ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗದವರಿಗೂ ಉಪಸ್ಥಿತರಿದ್ದರು.