ಪಿಂಚಣಿ ಮೊತ್ತ ಕನಿಷ್ಠ ರೂ ೭೫೦೦ಗೆ ಸಂಘರ್ಷ ಸಮಿತಿ ಒತ್ತಾಯ

ಕೋಲಾರ,ಜ,೮- ಭವಿಷ್ಯನಿಧಿ ಪಿಂಚಣೆ ಯೋಜನೆಯಡಿ ಮಾಸಿಕ ಪಿಂಚಣಿ ಮೊತ್ತವನ್ನು ಕನಿಷ್ಟ ೭೫೦೦ ಮತ್ತು ತುಟ್ಟಿಭತ್ಯೆ, ವೈದ್ಯಕೀಯ ಭತ್ಯೆಯೊಂದಿಗೆ ನೀಡಲು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ರಾಷ್ಟ್ರೀಯ ಸಂಘರ್ಷ ಸಮಿತಿ ವತಿಯಿಂದ ಕೋಲಾರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಅವರಿಗೆ ಮನವಿ ಸಲ್ಲಿಸಿ ಕೇಂದ್ರದ ಕಾರ್ಮಿಕ ಸಚಿವರಿಗೆ, ವಿತ್ತ ಸಚಿವರಿಗೆ ಹಾಗೂ ಪ್ರಧಾನಿಗಳಿಗೆ ಕಳುಹಿಸುವಂತೆ ಒತ್ತಾಯಿಸಲಾಯಿತು.


ಹೋರಾಟದಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ರಾಷ್ಟ್ರೀಯ ಸಂಘರ್ಷ ಸಮಿತಿಯ ಮುಖಂಡರುಗಳಾದ ಮೇಲೂರು ಅಮರ್, ಡಿಸ್ಕೋ ಶ್ರೀನಿವಾಸ್, ನಾ.ನಾರಾಯಣಸ್ವಾಮಿ, ಮಲ್ಲೇಶಯ್ಯ ಇದ್ದರು.


ಮುಂಬರುವ ದಿನಗಳಲ್ಲಿ ಸಮಿತಿ ವತಿಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮ ಗಳಾಗಲೀ, ಹೋರಾಟಗಳಾಗಲೀ ಸಕ್ರಿಯವಾಗಿ ಭಾಗವಹಿಸುವಂತೆ ಸಮಿತಿಯ ಮುಖಂಡರುಗಳಲ್ಲಿ ಮನವಿ ಮಾಡಲಾಯಿತು.