
ಕಲಬುರಗಿ:ಏ.2: ಅನ್ನ, ಅಕ್ಷರ, ಅರಿವು ಈ ರೀತಿಯ ತ್ರಿವಿಧ ದಾಸೋಹ ಮಾಡುತ್ತ ಮಕ್ಕಳ ಸೇವೆಯಲ್ಲೇ ತಮ್ಮ ಜೀವನ ಸವೆಸಿದ ತುಮಕೂರು ಸಿದ್ಧಗಂಗಾ ಮಠದ ಲಿಂ. ಡಾ. ಶಿವಕುಮಾರ ಸ್ವಾಮಿಗಳ ಬದುಕು ನಮಗೆಲ್ಲ ಮಾದರಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.
ನಗರದ ಜಸ್ಟಿಸ್ ಶಿವರಾಜ ಪಾಟೀಲ ಹಾಗೂ ಸರ್ವಜ್ಞ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಪೂಜ್ಯ ಲಿಂ. ಡಾ. ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು, ಪೂಜ್ಯ ಲಿಂ. ಡಾ. ಶಿವಕುಮಾರ ಸ್ವಾಮಿಗಳ ಜೀವನವೇ ಒಂದು ಸಂದೇಶವಾಗಿದ್ದು, ಜೀವನದಲ್ಲಿ ಏನಾದರೂ ಸಾಧಿಸಿ ಮೇಲೆ ಬರುವುದಕ್ಕಿಂತ ಹತ್ತು ಜನರನ್ನು ಮೇಲೆ ತಂದರೆ ಅದುವೇ ದೊಡ್ಡ ಸಾಧನೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪೆÇ್ರ. ಚನ್ನಾರಡ್ಡಿ ಪಾಟೀಲ ಮಾತನಾಡಿ, ಶಿವಕುಮಾರ ಸ್ವಾಮೀಜಿ ಶರಣರ ದಾಸೋಹ ಸಂಸ್ಕøತಿಯನ್ನು ಸಂಸ್ಕಾರವನ್ನಾಗಿಸಿ ಎಲ್ಲರಿಗೂ ಧಾರೆ ಎರೆಯುವ ಮೂಲಕ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದರು.
ಶಿಕ್ಷಣ ಬದುಕಿನ ದೀಕ್ಷೆ ಆಗಬೇಕು. ಜೀವನ ಅನ್ನುವುದು ಕಲೆ. ಕಲೆಯ ಸಿದ್ಧಿಗೆ ಸಾಧನೆ ಮುಖ್ಯ. ಈ ಕಲೆಯನ್ನು ರೂಢಿಸಿಕೊಳ್ಳಬೇಕಾದರೆ ಬದುಕಿನುದ್ದಕ್ಕೂ ನಿರಂತರ ಸಾಧನೆ ಮಾಡಲೇಬೇಕು ಎಂಬ ಸತ್ಯ ಸಂದೇಶ ನೀಡಿದ ಪೂಜ್ಯರು ಮನವೀಯ ನೇತಾರರು ಎಂದು ಅವರು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ಪ್ರಶಾಂತ ಕುಲಕರ್ಣಿ, ಶ್ರೀ ಕರುಣೇಶ್ ಹಿರೇಮಠ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು. ಶ್ರೀಮತಿ ತ್ರೀವೇಣಿ ಭಾವಿ ವಂದಿಸಿದರು.
“ಶಿಕ್ಷಣ ದಾಸೋಹ, ಬಡವರು, ದೀನ ದಲಿತರ ಸೇವೆ, ಅಧ್ಯಾತ್ಮ ಸಾಧನೆ ಮೂಲಕ ನಮ್ಮೆಲ್ಲರ ಜನಮಾನಸಲ್ಲಿ ಶಾಶ್ವತವಾಗಿ ಉಳಿದಿರುವ ಶಿವಕುಮಾರ ಸ್ವಾಮೀಜಿ ಇಡೀ ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ.”
- ಪೆÇ್ರ. ಚನ್ನಾರಡ್ಡಿ ಪಾಟೀಲ
ಸಂಸ್ಥಾಪಕರು, ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹ, ಕಲಬುರಗಿ




















