Home ಜಿಲ್ಲೆ ಕಲಬುರಗಿ ಸಿಯುಕೆಯಲ್ಲಿ ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಣೆ

ಸಿಯುಕೆಯಲ್ಲಿ ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಣೆ

ಕಲಬುರಗಿ:ಫೆ.18:”ಸಂತ ಸೇವಾಲಾಲ್ ಮಹಾರಾಜರು ಮಹಾನ್ ಮಾನವತಾವಾದಿ ಮತ್ತು ಸಾಮಾಜಿಕ ಸುಧಾರಕರಾಗಿದ್ದರು” ಎಂದು ಸಿಯುಕೆಯ ಗೌರವಾನ್ವಿತ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು. ಇಂದು ಅವರು ಕಲಬುರಗಿಯ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂತ ಸೇವಾಲಾಲ್ ಮಹಾರಾಜರ 287 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಅವರು ಮುಂದುವರೆದು ಮಾತನಾಡಿ “ಸಂತ ಸೇವಾಲಾಲ್ ಮಹಾರಾಜರು ಯಾವಾಗಲೂ ಎಲ್ಲಾ ಜೀವಿಗಳ ಸಹಬಾಳ್ವೆಯನ್ನು ಪ್ರತಿಪಾದಿಸುತ್ತಿದ್ದರು. ನಾವು ಬದುಕಬೇಕು ಮತ್ತು ಇತರರನ್ನು ಬದುಕಲು ಬಿಡಬೇಕು ಎಂಬುದು ಅವರ ತತ್ವವಾಗಿತ್ತು. ನಮ್ಮ ದೇಶದ ಶ್ರೇಷ್ಠತೆ ಎಂದರೆ ವೈವಿಧ್ಯತೆಯಲ್ಲಿ ಏಕತೆ. ನಾವು ಇತರರ ಸಂಸ್ಕøತಿ ಮತ್ತು ಸಂಪ್ರದಾಯವನ್ನು ಗೌರವಿಸಬೇಕು. ಸಿಯುಕೆ ಒಂದು ಸಣ್ಣ ಭಾರತ, ನಮ್ಮಲ್ಲಿ ದೇಶಾದ್ಯಂತ ಅನೇಕ ರಾಜ್ಯಗಳ ವಿದ್ಯಾರ್ಥಿಗಳು ಇದ್ದಾರೆ ಮತ್ತು ನಾವು ಎಲ್ಲಾ ಸಮುದಾಯಗಳ ಹಬ್ಬಗಳನ್ನು ಆಚರಿಸುತ್ತೇವೆ. ಇದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ನಡುವೆ ಸಾಮರಸ್ಯ ಮತ್ತು ಸಹಕಾರವನ್ನು ಸೃಷ್ಟಿಸುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಬಾಗಲಕೋಟೆಯ ನೀಲಾನಗರ ಶಕ್ತಿ ಪೀಠದ ಶ್ರೀ ಕುಮಾರ ಮಹಾರಾಜರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, “ಸಂತ ಸೇವಾಲಾಲ್ ಮಹಾರಾಜರು 12 ನೇ ಶತಮಾನದ ಶರಣರು ಪ್ರಸ್ತಾಪಿಸಿದ ಕಾಯಕ ಸಿದ್ದಾಂತದ ಮಹಾನ್ ಪ್ರತಿಪಾದಕರಾಗಿದ್ದರು. ಅವರು ವಿಚಾರವಾದಿ ಮತ್ತು ಪ್ರಾಯೋಗಿಕ ಚಿಂತಕರಾಗಿದ್ದರು. ಅವರು ಬಂಜಾರ ಸಮುದಾಯದ ಸರ್ವೋಚ್ಚ ಗುರುಗಳು. ಬಂಜಾರ ಜನರು ರಾಷ್ಟ್ರೀಯವಾದಿಗಳು ಮತ್ತು ಮಹಾನ್ ದೇಶಭಕ್ತರು. ಅವರು ಬ್ರಿಟಿಷರ ಒತ್ತಡಕ್ಕೆ ಮಣಿಯದೆ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬಂಜಾರ ಸಮುದಾಯವು ಒಂದೇ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಹೊಂದಿದೆ. ನಾವೆಲ್ಲರೂ ಸಂತ ಸೇವಾಲಾಲ್ ಮಹಾರಾಜರ ಉಪದೇಶವನ್ನು ಅನುಸರಿಸಬೇಕು” ಎಂದು ಹೇಳಿದರು.
ಅತಿಥಿ ಭಾಷಣಕಾರ ಮತ್ತು ಮಹಾರಾಷ್ಟ್ರದ ಗೋರ್ ಸಿಕ್ವಾಡಿ ಮತ್ತು ಗೋರ್ ಸೇನಾದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಸಂದೇಶ ಚೌಹಾಣ ಮಾತನಾಡಿ, “ಸಂತ ಸೇವಾಲಾಲ್ ಮಹಾರಾಜರು ವೈಜ್ಞಾನಿಕ ಚಿಂತಕರು, ತತ್ವಜ್ಞಾನಿಗಳು ಮತ್ತು ಕ್ರಾಂತಿಕಾರಿಗಳು ಆಗಿದ್ದರು. ಒಂದು ದಿನ ನೀರು ಮಾರಾಟವಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು ಅದು ಇಂದು ವಾಸ್ತವವಾಗಿದೆ. ಅನ್ಯಾಯವನ್ನು ಸಹಿಸಬೇಡಿ ಮತ್ತು ಅದರ ವಿರುದ್ಧ ಹೋರಾಡಿ ಎಂದು ಅವರು ಹೇಳಿದರು. ಮಹಿಳೆಯರಿಗೆ ಸಮಾನತೆ, ನ್ಯಾಯ ಮತ್ತು ಜೀವನದ ಘನತೆಯನ್ನು ಅವರು ಪ್ರತಿಪಾದಿಸಿದ್ದಾರೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಬಂಜಾರ ಸಮುದಾಯವು ಪಾತ್ರ ಮತ್ತು ಜವಾಬ್ದಾರಿಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿದು ಬಡತನವನ್ನು ತೊಡೆದುಹಾಕಬೇಕು. ವಿದ್ಯಾರ್ಥಿಗಳು ಅವರ ಬೋಧನೆಗಳಿಂದ ಕಲಿಯಬೇಕು ಮತ್ತು ಸಮಾಜಕ್ಕಾಗಿ ಕೆಲಸ ಮಾಡಬೇಕು; ಇಲ್ಲದಿದ್ದರೆ ಶಿಕ್ಷಣಕ್ಕೆ ಅರ್ಥವಿಲ್ಲ” ಎಂದು ಹೇಳಿದರು.
ಕುಲಸಚಿವರಾದ ಆರ್ ಆರ್ ಬಿರಾದಾರ್ ಅವರು, “ಸಾಮರಸ್ಯ, ಎಲ್ಲರನ್ನೂ ಒಳಗೊಳ್ಳುವ, ನ್ಯಾಯಯುತ ಮತ್ತು ಸಮ ಸಮಾಜವನ್ನು ನಿರ್ಮಿಸುವುದು ಸಂತ ಸೇವಾಲಾಲ್ ಮಹಾರಾಜರ ಪ್ರಮುಖ ಬೋಧನೆಗಳಾಗಿವೆ. ಅವರು ಪ್ರಕೃತಿ ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಪ್ರಾಮುಖ್ಯತೆ ನೀಡಿದ್ದಾರೆ. ಅವರು ಮಹಿಳಾ ಸಬಲೀಕರಣದ ಮಹಾನ್ ಪ್ರತಿಪಾದಕರಾಗಿದ್ದರು. ವಿಧವೆಯರ ಪುನರ್ವಿವಾಹ ಮತ್ತು ದೇವದಾಸಿ ಪದ್ಧತಿ ನಿರ್ಮೂಲನೆಗೆ ಅವರು ಒತ್ತು ನೀಡಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಸಂಯೋಜಕ ಡಾ. ಪಿ ಎಸ್ ಕಟ್ಟಿಮನಿ ಸ್ವಾಗತಿಸಿದರು; ಶ್ರೀ ಸತ್ಯಂ ಜಾಧವ ಅವರು ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಪೆÇ್ರ. ಚನ್ನವೀರ ಆರ್ ಎಂ, ಪೆÇ್ರ. ಎಂ ಎಸ್ ಪಸೋಡಿ, ಪೆÇ್ರ. ವಿಕ್ರಮ ವಿಸಾಜಿ, ಪೆÇ್ರ. ವಿಜಯಕುಮಾರ, ಡಾ. ಗೋವಿಂದ ಜಾಧವ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸತೀಶ್ ಎಸ್ ಚೌಹಾಣ, ಡಾ. ಜೈಪಾಲ ರಾಥೋಡ್, ಡಾ. ಸಂಜೀವರಾಯಪ್ಪ, ಡಾ. ಶಿವಕುಮಾರ ಬೆಳ್ಳಿ, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಬಂಜಾರ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.