
ಸೈದಾಪುರ:ನ.೮:ಪಟ್ಟಣದ ವಿಶ್ವನಾಥ ಮಂದಿರದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಪ್ರತಿ ನಿತ್ಯ ಮಹಿಳೆಯರು ಮಕ್ಕಳು ಸೇರಿದಂತೆ ಕುಟಂಬ ಸಮೇತ ಆಗಮಿಸಿ ದೀಪಬೆಳಗಿ ಸಂಭ್ರಮಿಸುತ್ತಿದ್ದಾರೆ. ಕಾರ್ತಿಕ ಮಾಸ ಅಂತ್ಯAತ್ ಪವಿತ್ರವಾಗಿದ್ದೂ ದೇವಸ್ಥಾನಗಳಲ್ಲಿ ದೀಪವನ್ನು ಬೆಳಗುವುದರಿಂದ ಸಮೃದ್ದಿ ಮತ್ತು ಅದೃಷ್ಟ ನಮ್ಮನ್ನು ಆಕರ್ಷಿಸುತ್ತದೆ. ಮಂಗಳಕರ ಶಕ್ತಿಗಳು ಧನಾತ್ಮಕ ಚೈತನ್ಯನ್ನುಂಟು ಮಾಡುವುದರ ಮೂಲಕ ಉತ್ತಮ ಬದಕನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಧಾರ್ಮಿಕ ಆಚರಣಗಳ ಹಿಂದೆ ಮಹತ್ವದ ಸಾರವಿದೆ. ಅದೇ ರೀತಿಯಾಗಿ ಕಾರ್ತಿಕ ಮಾಸದಲ್ಲಿ ದೀಪ ಬೆಳಗುವುದರಿಂದ ಕಷ್ಟಗಳನ್ನು ದೂರವಾಗಿ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಹಿನ್ನೆಲೆ ಇದಾಗಿದೆ ಎಂಬುವುದು ಮಹಿಳೆಯರದ್ದಾಗಿದೆ.























