ಸೈದಾಪುರ: ಭುವನೇಶ್ವರಿ ಭಾವಚಿತ್ರದ ಅದ್ಧೂರಿ ಮೆರವಣಿಗೆ

ಸೈದಾಪುರ:ನ.೨:ಪ್ರತಿ ವರ್ಷದಂತೆ ವಲಯ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಗ್ರಾಮ ಪಂಚಾಯತ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ನಾಡದೇವಿ ಶ್ರೀ ಭುವನೇಶ್ವರಿ ಭಾವಚಿತ್ರ ಮೆರವಣಿಗೆಗೆ ಗ್ರಾ.ಪಂ.ಅಧ್ಯಕ್ಷೆ ಮರೆಮ್ಮ ರಡ್ಡೆಪ್ಪ ಚಾಲನೆ ನೀಡಿದರು.
ರೈಲು ನಿಲ್ದಾಣದಿಂದ ಹೊರಟ ಕನ್ನಡಾಂಬೆಯ ಮೆರವಣೆಗೆ ಬಸವೇಶ್ವರ ವೃತ್ತ ಮೂಲಕ ಸ್ಥಳೀಯ ಮಾದರಿ ಹಿರಿಯ ಪ್ರಾಥಮಿಕ (ಎಂಪಿಎಸ್) ಶಾಲೆಯನ್ನು ತಲುಪಿತು. ಮೆರವಣಿಗೆಯುದ್ದಕ್ಕೂ ಶಾಲೆಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಗಮನ ಸೆಳೆದವು.
ವಲಯ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ ದುಪ್ಪಲ್ಲಿ, ಗೌರವ ಕಾರ್ಯದರ್ಶಿ ಬಸವಲಿಂಗಪ್ಪ ಮಲ್ಹಾರ, ಸಿದ್ರಾಮ ತೊಗಟವೀರ, ಶರಣಬಸ್ಸಪ್ಪ, ವಿಶ್ವನಾಥರೆಡ್ಡಿ ಚಿಗಾನೂರ, ನಿಕಟ ಪೂರ್ವ ಅಧ್ಯಕ್ಷ ಸಿದ್ದಲಿಂಗಪ್ಪ ಪಾಟೀಲ ಮುನಗಾಲ, ಮುಕುಂದಕುಮಾರ ಅಲಿಝಾರ, ಲಿಂಗಾರೆಡ್ಡಿ ನಾಯಕ, ಹಂಪಣ್ಣ ಸಜ್ಜನಶೆಟ್ಟಿ, ಜಿ.ಎಂ.ಗುರುಪ್ರಸಾದ, ಮಲ್ಲಿಕಾರ್ಜುನ ಬಳೆ, ವೆಂಕಪ್ಪ ದೊಡ್ಡಮನಿ, ಬಸವರಾಜ ನಾಯಕ, ವಲಯ ಕಸಾಪ ಸದಸ್ಯರು, ಗ್ರಾಮಸ್ಥರು, ವ್ಯಾಪಾರಸ್ಥರು, ಕನ್ನಡಪರ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಲಯದ ಕನ್ನಡಸಕ್ತರೂ ಪಾಲ್ಗೊಂಡಿದ್ದರು.